ಕ್ರಿಯಾತ್ಮಕ ಯೋಜನೆಗಳಿಂದ ಉತ್ತಮ ಬದುಕು ರೂಪಿಸಿಕೊಳ್ಳಿ

MAHESH NEW
Published on

ಧಾರವಾಡ : ಇಲ್ಲಿನ ಹಳಿಯಾಳ ಮುಖ್ಯ ರಸ್ತೆಯಲ್ಲಿರುವ ಐ.ಸಿ.ಎಸ್. ಮಹೇಶ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ರೋಟರಿ ಕ್ಲಬ್ ಮಿಡ್​ಟೌನ್ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಬೇಸಿಕ್ ಲೈಫ್ ಸಪೋರ್ಟ್ (ಬಿ.ಎಲ್.ಎಸ್), ಕಾರ್ಡಿಯೋಪಲ್ಮನರಿ ರೆಸಸಿಟೇಶನ್(ಸಿ.ಪಿ.ಆರ್) ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಅತಿಥಿಯಾಗಿದ್ದ ರೋಟರಿ ಕ್ಲಬ್ ಮಿಡ್​ಟೌನ್ ಅಧ್ಯಕ್ಷ ಶಿವಯೋಗಿ ಅಮ್ಮಿನಗಡ, ರೋಟರಿ ಕ್ಲಬ್ ಬೆಳೆದು ಬಂದ ರೀತಿ ಹಾಗೂ ಸಾಮಾಜಿಕವಾಗಿ ಅದು ಮಾಡುತ್ತಿರುವ ಸೇವೆಯನ್ನು ವಿವರಿಸಿದರು. ವಿಧವೆಯರಿಗೆ ಈ ಸಂಸ್ಥೆಯ ಮೂಲಕ ಸ್ವಾವಲಂಬನೆ ಜೀವನಕ್ಕಾಗಿ ಹಸುಗಳನ್ನು ನೀಡಿ, ಅವರ ಜೀವನೋಪಾಯಕ್ಕೆ ಒಂದು ವ್ಯವಸ್ಥೆ ಕಲ್ಪಿಸುವುದಾಗಿ ಹೇಳಿದರು.

ಮತ್ತೊಬ್ಬ ಅತಿಥಿ ಡಾ. ಪ್ರಕಾಶ ರಾಮನಗೌಡರ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ಮಕ್ಕಳಿಗೆ ಹೃದಯಕ್ಕೆ ಸಂಬಂಧಿಸಿದ ಖಾಯಿಲೆ ಬಂದಾಗ ತುರ್ತಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಸಿದರು.

ಕಾಲೇಜಿನ ಆಡಳಿತಾಧಿಕಾರಿ ಬಸವಕಿರಣ ಜೆ.ಎಚ್. ಮಾತನಾಡಿ, ವಿದ್ಯಾರ್ಥಿಗಳು ಆರೋಗ್ಯ ಸಧೃಡತೆಯನ್ನು ಪಡೆದುಕೊಳ್ಳಬೇಕಾದರೆ ಹಿತಮಿತವಾದ ಆಹಾರ ಪದ್ದತಿ, ಜೀವನಶೈಲಿ, ಕ್ರಿಯಾತ್ಮಕ ಯೋಜನೆಗಳನ್ನು ರೂಢಿಸಿಕೊಂಡರೆ ಮಾತ್ರ ಸಮಾಜದಲ್ಲಿ ಉತ್ತಮವಾಗಿ ಬದುಕಲು ಸಾಧ್ಯ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಬಿ.ಸಿ. ಪಾಟೀಲ ಮಾತನಾಡಿ, ನಮ್ಮ ಆರೋಗ್ಯ ಕಾಳಜಿಯಲ್ಲಿ ವೈದ್ಯರ ಪಾತ್ರ ಅತ್ಯಂತ ಮುಖ್ಯವಾಗಿದೆ ಎಂದರು.

ಐ.ಸಿ.ಎಸ್ ಸ್ಪರ್ಧಾತ್ಮಕ ಪರೀಕ್ಷೆಯ ಆಡಳಿತಾಧಿಕಾರಿ ಮುರಳೀಧರ ಹೆಗಡೆ, ರೋಟರಿ ಕ್ಲಬ್​ನ ಕಾರ್ಯದರ್ಶಿ ದೀಪಕ ಆಕಳವಾಡಿ, ಅಮೃತ ಪತ್ರವಳ್ಳಿ, ಹರ್ಷ ತುರಮರಿ, ಸಂತೋಷ ಕಟಗಿ, ಚಂದ್ರಶೇಖರ ನಾಗಶೆಟ್ಟಿ, ಶೇಖರ ಕುಂದಗೋಳ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net