ಸ್ವಾಭಿಮಾನಿ ವಿಜಯ ದಿನವೇ ವಿಜಯದಶಮಿ

Trajectory movement
ಪಥ ಸಂಚಲನ
Published on

ದೊಡ್ಡಬಳ್ಳಾಪುರ: ವಿಜಯದಶಮಿ ಪ್ರಯುಕ್ತ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೇತೃತ್ವದಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಆರ್‌ಎಸ್‌ಎಸ್ ರ್ಕಾಯಕರ್ತರು ಪಥಸಂಚಲನ ನಡೆಸಿದರು. ಪಾಲನಜೋಗಿಹಳ್ಳಿಯ ಪಾಂಡುರಂಗಸ್ವಾಮಿ ದೇವಾಲಯದ ಮುಂಭಾಗದಿಂದ ಪಥ ಸಂಚಲನ ಆರಂಭವಾಗಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ದಕ್ಷಿಣ ಸಹ ಪ್ರಾಂತ ಪ್ರಚಾರಕ್ ನಂದೀಶ್ ಮಾತನಾಡಿ, ಭಾರತೀಯ ಪರಂಪರೆಯಲ್ಲಿ ವಿಜಯದಶಮಿಗೆ ಮಹತ್ವದ ಸ್ಥಾನವಿದೆ. ಸನಾತನ ಸಂಸ್ಕೃತಿ ಮತ್ತು ಹಿಂದು ಧರ್ಮದ ಪುರಾಣಗಳಲ್ಲಿ ವಿಜಯದಶಮಿ ಸ್ವಾಭಿಮಾನಿ ವಿಜಯ ದಿನವಾಗಿದೆ. ಧರ್ಮವನ್ನು ರಕ್ಷಿಸಿ, ಅಧರ್ಮ ಅಳಿಸುವ ಮೂಲಕ ಲೋಕಹಿತ ಕಾಯುವ ಚಿಂತನೆಗಳು ಇದರ ಮುಖ್ಯ ಭೂಮಿಕೆ, ದೇಶದ ಸಮಗ್ರತೆ ಮತ್ತು ಐಕ್ಯತೆಯ ಪ್ರಾತಿನಿಧಿಕ ಹಬ್ಬ ಮತ್ತು ಸಾಂಸ್ಕೃತಿಕ ಮೌಲ್ಯಗಳ ಮರುಮನನಕ್ಕೆ ವಿಜಯದಶಮಿ ಆಚರಣೆ ಅಗತ್ಯ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net