ಆರ್‌ಎಸ್‌ಎಸ್ ದೇಶಪ್ರೇಮದ ಪ್ರತೀಕ

rss
rss Trajectory
Published on

ವಿಜಯವಾಣಿ ಸುದ್ದಿಜಾಲ ಆನೇಕಲ್
ತಾಲೂಕಿನ ಹೆಬ್ಬಗೋಡಿಯಲ್ಲಿ ವಿಜಯದಶಮಿ ನಿಮಿತ್ತ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಪಥಸಂಚಲನ ಹಮ್ಮಿಕೊಳ್ಳಲಾಗಿತ್ತು. ತಾಲೂಕಿನ ವಿವಿಧ ಆರ್‌ಎಸ್‌ಎಸ್ ಶಾಖೆಗಳ ಸಾವಿರಾರು ಸ್ವಯಂಸೇವಕರು ಪಾಲ್ಗೊಂಡಿದ್ದರು. ಬೆಳಗ್ಗೆ 7.30ಕ್ಕೆ ಪ್ರಾರಂಭವಾದ ಪಥಸಂಚಲನ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ಹೆಬ್ಬಗೋಡಿಯ ಮೈದಾನದಲ್ಲಿ ಅಂತಿಮಗೊಂಡಿತು.
ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಎಂ.ಯಂಗಾರೆಡ್ಡಿ ಮಾತನಾಡಿ, ಆರ್‌ಎಸ್‌ಎಸ್ ದೇಶಪ್ರೇಮದ ಪ್ರತೀಕವಾಗಿದ್ದು, ದೇಶಭಕ್ತಿ ಮೂಡಿಸಲು ಇರುವ ಪ್ರಮುಖ ಸಂಘಟನೆಯಾಗಿದೆ ಎಂದ ಅವರು, ಪಥಸಂಚಲನದ ಮೂಲಕ ತಾಲೂಕಿನ ಯುವಕರಲ್ಲಿ ದೇಶಭಕ್ತಿ ಮೂಡಿಸಲು ಶ್ರಮಿಸಲಾಗುತ್ತಿದೆ. ಆರ್‌ಎಸ್‌ಎಸ್‌ನ ಪ್ರತಿ ಶಾಖೆಗಳಲ್ಲಿಯೂ ವಿದ್ಯಾರ್ಥಿಗಳಿಗೆ ಯುವಕರಿಗೆ ದೇಶಪ್ರೇಮ ಮೂಡಿಸಲಾಗುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net