ದೇಶ ದ್ರೋಹಿಗಳು ಪಾಕ್ ಕುಮ್ಮಕ್ಕಿನಿಂದ ಹತ್ಯೆ ಮಾಡಿದ್ದಾರೆ

B.Y.VIJAYENDRA
B.Y.VIJAYENDRA
Published on

ರಾಯಚೂರು ಕಾಶ್ಮೀರದಲ್ಲಿ ನಡೆದಿರುವ ದುರ್ಘಟನೆಗೆ ದೇಶಾದ್ಯಂತ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ದೇಶದ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮೀತ್ ಷಾ ಅವರು ಉಗ್ರಗಾಮಿಗಳನ್ನು ಮಟ್ಟಹಾಕಲಿದ್ದಾರೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ನಗರದಲ್ಲಿ ಬುಧವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿ, ದೇಶ ದ್ರೋಹಿಗಳು ಪಾಕಿಸ್ಥಾನದ ಕುಮ್ಮಕ್ಕಿನಿಂದ ದಾಳಿ ಮಾಡಿ ೨೮ ಜನರನ್ನು ಹತ್ಯೆ ಮಾಡಿದ್ದಾರೆ. ಇವರಿಗೆ ತಕ್ಕ ಉತ್ತರ ಪ್ರಧಾನಿ ಮೋದಿ ಕೊಟ್ಟೆ ಕೊಡುತ್ತಾರೆ ಎನ್ನುವ ಸಂಪೂರ್ಣ ವಿಶ್ವಾಸ ದೇಶದ ಜನರಿಗಿದೆ. ಅರಬ್ ದೇಶದ ಪ್ರವಾಸದಲ್ಲಿದ್ದ ಪ್ರಧಾನಿಯವರುನ ದೇಶಕ್ಕೆ ಮರಳಿದ್ದು, ಸಧ್ಯ ಸರಣಿ ಸಭೆ ನಡೆಸಿz್ದÁರೆ, ಘಟನಾ ಸ್ಥಳಕ್ಕೆ ಗೃಹ ಸಚಿವ ಅಮಿತ್ ಶಾ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರೀಶಿಲನೆ ನಡೆಸಿದ್ದಾರೆ ಎಂದರು.

ಕಾAಗ್ರೆಸ್‌ನವರಿಗೆ ಭದ್ರತೆ ಕುರಿತು ಮಾತನಾಡುವ ನೈತಿಕತೆ ಇಲ್ಲ. ಈ ಹಿಂದೆ ಯಾವ ರೀತಿ ಸೈನಿಕರ, ಸಾಮಾನ್ಯ ಜನರು ಉಗ್ರಗಾಮಿಗಳಿಂದ ಮೃತಪಡುತ್ತಿದ್ದರು, ಆದರೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಽಕಾರಕ್ಕೆ ಬಂದ ನಂತರ ದೇಶದಲ್ಲಿ ಶಾಂತಿ ನೆಲೆಸಿದೆ.ನ ದೇಶದಲ್ಲಿ ರಾಹುಲï ಗಾಂಽ ಯಂತ ವಿರೋಧ ಪಕ್ಷದ ನಾಯಕ ನಮಗೆ ಇರೊದು ದುರಂತದ ವಿಷಯವಾಗಿದೆ. ಬೇರೆ ದೇಶಕ್ಕೆ ತೆರಳಿದಾಗ ನಮ್ಮ ದೇಶಕ್ಕೆ ಟೀಕಿಸುವ ಮಾತನಾಡುವುದು ಶೋಚಾನಿಯ ಸಂಘತಿಯಾಗಿದೆAದರು.

ರಾಜ್ಯದಲ್ಲಿ ಜಾತಿ ಗಣತಿ ಜಾರಿ ಮಾಡುತ್ತಿರುವುದು ಅವೈಜ್ಞಾನಿಕವಾಗಿದೆ. ಸಿಎಂ ಸಿದ್ದರಾಮಯ್ಯ ಅವರು ಕುರ್ಚಿಗಾಗಿ ಹಾಗೂ ಒಂದು ಸಮುದಾಯದ ಓಲೈಕೆಗಾಗಿ ಜಾತಿಗಣಿತಿ ಮಾಡುತ್ತಿದ್ದಾರೆ ಇದನ್ನು ನಾವು ಖಂಡಿಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ತಿನ ಮುಖ್ಯ ಸಂಚೇತಕ ಎನ್.ರವಿ ಕುಮಾರ,ಡಾ.ಶಿವರಾಜ ಪಾಟೀಲ್ ಸೇರಿ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net