ದೇಶದ್ರೋಹ ಹೇಳಿಕೆ ನೀಡುವವರನ್ನು ಕೂಡಲೇ ಬಂಧಿಸಿ ಎಂದು ಕರವೇ ಯುವಸೇನೆ ಒತ್ತಾಯ

210220 Yalaburga Karave Appeale to Arrest Traitor
Published on

ಯಲಬುರ್ಗಾ: ಪಾಕಿಸ್ತಾನ ಪರ ಘೋಷಣೆ ಕೂಗಿದ ಅಮೂಲ್ಯ ಹೇಳಿಕೆ ಖಂಡಿಸಿ ಕರವೇ ಯುವಸೇನೆ ತಾಲೂಕು ಘಟಕದಿಂದ ಶುಕ್ರವಾರ ಪಟ್ಟಣದ ಪೊಲೀಸ್ ಠಾಣೆಯ ಎಎಸ್‌ಐ ಸಣ್ಣಬಸಪ್ಪ ಹೂಗಾರ್ ಮೂಲಕ ಗೃಹ ಇಲಾಖೆ ಕಾರ್ಯದರ್ಶಿಗೆ ಮನವಿ ಸಲ್ಲಿಸಲಾಯಿತು.

ಘಟಕದ ತಾಲೂಕು ಅಧ್ಯಕ್ಷ ಶಿವಕುಮಾರ ನಾಗನಗೌಡ್ರ ಮಾತನಾಡಿ, ಅಮೂಲ್ಯ ಅನ್ನುವ ದೇಶದ್ರೋಹಿ ಮಹಿಳೆ ಸಿಎಎ, ಎನ್‌ಆರ್‌ಸಿ ವಿರೋಧಿ ಪ್ರತಿಭಟನೆ ವೇಳೆ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದು, ರಾಷ್ಟ್ರ ಮತ್ತು ಭಾರತ ಮಾತೆಗೆ ಅಪಮಾನವಾಗಿದೆ. ಇಡೀ ದೇಶವೇ ಈ ಹೇಳಿಕೆಯನ್ನು ಖಂಡಿಸಿದೆ. ಇಂಥವರಿಗೆ ದೇಶದಲ್ಲಿ ಯಾವುದೇ ಭಯವಿಲ್ಲದಾಗಿದೆ. ದೇಶದ್ರೋಹ ಘೋಷಣೆ ಕೂಗಿರುವ ಅಮೂಲ್ಯಾಳನ್ನು ಕೂಡಲೇ ಬಂಧಿಸಬೇಕು. ಯಾವುದೇ ಕಾರಣಕ್ಕೂ ಬಿಡುಗಡೆ ಮಾಡದೇ ತಕ್ಕ ಶಿಕ್ಷೆ ನೀಡಬೇಕು. ಇದರ ಹಿಂದೆ ಯಾರ ಕೈವಾಡವಿದೆ ಎನ್ನುವುದನ್ನು ತನಿಖೆ ನಡೆಸಿ, ಅವರನ್ನು ಬಂಧಿಸಿ, ಕಠಿಣ ಕ್ರಮ ಕೈಗೊಳ್ಳಬೇಕು. ದೇಶದ್ರೋಹ ಹೇಳಿಕೆ ನೀಡುವವರನ್ನು ಗಲ್ಲಿಗೇರಿಸುವಂತಹ ಕಾನೂನು ಜಾರಿಗೆ ಮಾಡಿದಾಗ, ದೇಶದಲ್ಲಿ ಶಾಂತತೆ ನೆಲೆಸಲು ಸಾಧ್ಯ ಎಂದು ಆಗ್ರಹಿಸಿದರು.

ಪದಾಧಿಕಾರಿಗಳಾದ ಕಲ್ಲಪ್ಪ ಕರಮುಡಿ, ದೇವಪ್ಪ ಆರೇರ, ಯಮನೂರಪ್ಪ ನಾಯಕ್, ಮಹಾಂತೇಶ ಆದೇಶ ಭೋವಿ, ಶ್ರೀಕಾಂತ, ಶಿವು ಮ್ಯಾಗೇರಿ, ಶರಣಪ್ಪ ಹಳ್ಳಿ, ಮೌನೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net