ಭಾರಿ ಮಳೆಗೆ ರೈಲು ಸಂಚಾರದಲ್ಲಿ ವ್ಯತ್ಯಯ

Train_2
Published on

ಮಂಗಳೂರು: ಭಾರಿ ಮಳೆಯಿಂದಾಗಿ ಮುರುಡೇಶ್ವರ ಮತ್ತು ಭಟ್ಕಳ ರೈಲು ನಿಲ್ದಾಣಗಳ ನಡುವಿನ ಕೆಲವು ಪ್ರದೇಶಗಳಲ್ಲಿ ಹಳಿಗಳಲ್ಲಿ ನೀರು ನಿಂತಿರುವ ಹಿನ್ನೆಲೆಯಲ್ಲಿ ಕೊಂಕಣ ರೈಲು ಮಾರ್ಗದ ರೈಲು ಸಂಚಾರದಲ್ಲಿ ವ್ಯತ್ಯಯವಾಗಿದೆ.

ನಂ.06602 ಮಂಗಳೂರು ಸೆಂಟ್ರಲ್-ಮಡಗಾಂವ್ ಜಂಕ್ಷನ್ ರೈಲನ್ನು ಉಡುಪಿ ರೈಲು ನಿಲ್ದಾಣದಲ್ಲಿ ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ. ನಂ.06601 ಮಡಗಾಂವ್ ಜಂಕ್ಷನ್- ಮಂಗಳೂರು ಸೆಂಟ್ರಲ್ ರೈಲು ಸಂಚಾರವನ್ನು ಮಂಗಳವಾರದ ಮಟ್ಟಿಗೆ ರದ್ದುಪಡಿಸಲಾಗಿದೆ.

ನಂ.11098 ಎರ್ನಾಕುಲಂ ಜಂಕ್ಷನ್-ಪುಣೆ ಎಕ್ಸ್‌ಪ್ರೆಸ್ ರೈಲನ್ನು ಭಟ್ಕಳ ಸ್ಟೇಷನ್, ನಂ.16595 ಬೆಂಗಳೂರು -ಕಾರವಾರ ಎಕ್ಸ್‌ಪ್ರೆಸ್ ರೈಲು ಶಿರೂರು ನಿಲ್ದಾಣ, ನಂ.16334 ತಿರುವನಂತಪುರಂ ಸೆಂಟ್ರಲ್-ವೆರಾವಲ್ ಜಂಕ್ಷನ್ ಎಕ್ಸ್‌ಪ್ರೆಸ್ ರೈಲನ್ನು ಸೇನಾಪುರ ಸ್ಟೇಷನ್, ನಂ.12201 ಲೋಕಮಾನ್ಯ ತಿಲಕ್ ಟರ್ಮಿನಲ್-ಕೊಚ್ಚುವೇಳಿ ಎಕ್ಸ್‌ಪ್ರೆಸ ರೈಲನ್ನು ಅಂಕೋಲ ಸ್ಟೇಷನ್, ನಂ.16516 ಕಾರವಾರ-ಯಶವಂತಪುರ ಎಕ್ಸ್‌ಪ್ರೆಸ್ ರೈಲನ್ನು ಹೊನ್ನಾವರ ಸ್ಟೇಷನ್‌ನಲ್ಲಿ ತಡೆ ಹಿಡಿಯಲಾಗಿದೆ.

ನೀರು ತೆರವು ಕಾಮಗಾರಿ ಪೂರ್ಣಗೊಂಡ ಬಳಿಕ ರೈಲು ಸಂಚಾರ ಪುನರಾರಂಭ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net