ತರಬೇತಿ ಕಾರ್ಯಾಗಾರ ನಾಳೆ

WEB LOGO
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ವಿಶ್ವ ವಿದ್ಯಾಲಯ, ಭಾರತೀಯ ರೆಡ್​ ಕ್ರಾಸ್​ ಸಂಸ್ಥೆ ಮತ್ತು ಕವಿವಿ ಯುವ ರೆಡ್​ ಕ್ರಾಸ್​ ಟಕದ ವತಿಯಿಂದ ವಿಶ್ವ ವಿದ್ಯಾಲಯ ಮಟ್ಟದ ಮಹಾವಿದ್ಯಾಲಯಗಳ ಯುವ ರೆಡ್​ ಕ್ರಾಸ್​ ಕಾರ್ಯಕ್ರಮ ಅಧಿಕಾರಿಗಳಿಗೆ ಸೆ. 20ರಂದು ಬೆಳಗ್ಗೆ 10.30ಕ್ಕೆ ಇಲ್ಲಿನ ಕವಿವಿಯ ಡಾ. ಬಿ.ಆರ್​. ಅಂಬೇಡ್ಕರ್​ ಅಧ್ಯಯನ ಪೀಠದ ಪುಲೆ ಸಭಾ ಭವನದಲ್ಲಿ ಒಂದು ದಿನದ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
ವಿಧಾನಪರಿಷತ್​ ಸದಸ್ಯ ಎಸ್​.ವಿ. ಸಂಕನೂರ ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾಧಿಕಾರಿ ದಿವ್ಯ ಪ್ರಭು ವಿಶೇಷ ಆಹ್ವಾನಿತರಾಗಿ ಆಗಮಿಸುವರು. ಅತಿಥಿಗಳಾಗಿ ರಾಜ್ಯದ ಭಾರತೀಯ ರೆಡ್​ ಕ್ರಾಸ್​ ಸಂಸ್ಥೆ ಉಪ ಸಭಾಪತಿ ಆನಂದ ಜಿಗಜಿನ್ನಿ, ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಶಂಕರ ಮುಗದ, ಮಹಾಂತೇಶ ವೀರಾಪೂರ ಆಗಮಿಸುವರು.
ಹುಬ್ಬಳ್ಳಿಯ ಹಿರಿಯ ವೈದ್ಯ ಡಾ.ವಿ.ಬಿ. ನಿಟಾಲಿ ಅವರು ಪರಿಸರ ಮತ್ತು ಆರೋಗ್ಯದ ಮಹತ್ವ ಕುರಿತು, ಡಾ.ಉಮೇಶ ಹಳ್ಳಿಕೇರಿ ಅವರು ನಿತ್ಯ ಜೀವನದಲ್ಲಿ ಮಾರಕವಾದ ಕ್ಯಾನ್ಸರ್​ ಬಗ್ಗೆ ಹಾಗೂ ಪ್ರವಿಣ ಹಿರೇಮಠ ಅವರು ಪ್ರಥಮ ಚಿಕಿತ್ಸೆಯ ಪ್ರಯೋಜನಗಳ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಕವಿವಿ ಕುಲಪತಿ ಕೆ.ಬಿ. ಗುಡಸಿ ಅಧ್ಯಕ್ಷತೆ ವಹಿಸುವರು ಎಂದು ಕವಿವಿ ಯುವ ರೆಡ್​ ಕ್ರಾಸ್​ ಘಟಕದ ಸಲಹಾ ಸಮಿತಿ ಸದಸ್ಯ ಮಾರ್ತಾಂಡಪ್ಪ ಕತ್ತಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net