ಪರೀಕ್ಷೆ ಎದುರಿಸಲು ಬೇಕು ಆತ್ಮಸ್ಥೈರ್ಯ: ಸವಿತಾ ಶಿವಸುಬ್ರಹ್ಮಣ್ಯ ಭಟ್ ಸಲಹೆ

New Project (36)
Published on

ಕಡಬ: ಸ್ಪರ್ಧಾತ್ಮಕ ಯುಗದಲ್ಲಿ ಪರೀಕ್ಷೆಗಳನ್ನು ಎದುರಿಸಲು ಸೂಕ್ತ ತರಬೇತಿ ಅಗತ್ಯ.ಪರೀಕ್ಷೆಗೆ ಸಿದ್ಧತೆ ವಾಡಿಕೊಳ್ಳುವ ಕೌಶಲಗಳ ಬಗ್ಗೆ ತಿಳಿದುಕೊಂಡರೆ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ಸುಲಭವಾಗಿ ಎದುರಿಸುವ ಆತ್ಮಸ್ಥೈರ್ಯ ಬರುತ್ತದೆ ಎಂದು ಕಡಬ ಸರಸ್ವತೀ ವಿದ್ಯಾಲಯದ ಸಂಚಾಲಕಿ ಸವಿತಾ ಶಿವಸುಬ್ರಹ್ಮಣ್ಯ ಭಟ್ ಹೇಳಿದರು.

ಹನುವಾನ್‌ನಗರ ಕೇವಳ ಸರಸ್ವತೀ ವಿದ್ಯಾಲಯ ಪ್ರೌಢಶಾಲೆಯಲ್ಲಿ ಜೇಸಿಐ ಕಡಬ ಕದಂಬ ಟಕದ ವತಿಯಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಮಂಗಳವಾರ ಆಯೋಜಿಸಲಾಗಿದ್ದ ಪರೀಕ್ಷಾ ಪೂರ್ವಸಿದ್ಧತೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ವಾತನಾಡಿದರು.

ಜೇಸಿ ಅಧ್ಯಕ್ಷೆ ವಿಶ್ರುತಾ ರಾಜೇಶ್ ಅಧ್ಯಕ್ಷತೆ ವಹಿಸಿದ್ದರು. ಜೇಸಿಐ ಬೆಳ್ತಂಗಡಿ ವಲಯ ತರಬೇತುದಾರ ಶಂಕರ್ ರಾವ್ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಜೇಸಿಐ ಕಡಬ ಕದಂಬ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ನಾಗರಾಜ್ ಎನ್.ಕೆ., ಸರಸ್ವತೀ ವಿದ್ಯಾಲಯ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಶೈಲಶ್ರೀ ರೈ, ಜೇಸಿ ನಿಕಟಪೂರ್ವಾಧ್ಯಕ್ಷ ಜಾಫಿರ್ ಮಹಮ್ಮದ್, ಕಾರ್ಯಕ್ರಮ ನಿರ್ದೇಶಕ ಶ್ರೀಕೃಷ್ಣ ಎಂ.ಆರ್. ಮೊದಲಾದವರಿದ್ದರು.

ಮಮತಾ ದಿನೇಶ್ ಅತಿಥಿಗಳ ಪರಿಚಯಿಸಿದರು. ರಾಜೇಶ್ ಎ.ಕೆ. ಜೇಸಿವಾಣಿ ವಾಚಿಸಿದರು. ಕಾರ್ಯದರ್ಶಿ ನವ್ಯಕೃಷ್ಣ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net