

ಕುಂದಾಪುರ: ಮಹಿಳೆಯರು ಚರ್ಚ್‌ನಲ್ಲಿ ಆಯೋಜಿಸಿದ ಎಲ್ಲ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಸಂಘದ ಸದಸ್ಯರು ತಮ್ಮ ಸಂಸಾರದ ಜತೆಗೆ ಅಭಿವೃದ್ಧಿಗೂ ಕೈ ಜೋಡಿಸಬೇಕು ಎಂದು ಉಡುಪಿ ಡಯಾಸಿಸ್‌ನ ಸಂಪದ ಸಂಬಂಧ ಸಂಸ್ಥೆಯ ಸಂಯೋಜಕ ಸ್ಟೇನ್ಲಿ ಫನಾರ್ಂಡಿಸ್ ಹೇಳಿದರು.
ಭಾನುವಾರ ತಲ್ಲೂರು ಸಂತ ಫ್ರಾನ್ಸಿಸ್ ಆಸ್ಸಿಸಿ ದೇವಾಲಯದಲ್ಲಿ ಸ್ತ್ರೀ ಆಯೋಗದ ಸಹಕಾರದೊಂದಿಗೆ ಸ್ವ ಸಹಾಯ ಸಂಘದ ಮಹಿಳೆಯರಿಗೆ ನಡೆದ ತರಬೇತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.