ಬಿ-ಖಾತೆ - ನಗರಸಭೆ ಸದಸ್ಯರು- ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ

15-KGL PHOTO-2
filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 3145728;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: weather?null, icon:null, weatherInfo:100;temperature: 39;
Published on

ಹೂಟಗಳ್ಳಿ ನಗರಸಭೆ ಪೌರಾಯುಕ್ತ ಚಂದ್ರಶೇಖರ್ ಸಲಹೆ

ಕೊಳ್ಳೇಗಾಲ: ಅನಧಿಕೃತ ಬಡಾವಣೆಯ ನಿವೇಶನ, ಕಟ್ಟಡಗಳಿಗೆ ಬಿ-ಖಾತೆ ನೀಡಲು 2023-24ನೇ ಸಾಲಿನ ಹಿಂದಿನ 6 ವರ್ಷಕ್ಕೆ ಡಬಲ್ ಟ್ಯಾಕ್ಸ್ ಕಟ್ಟಿಸಿಕೊಳ್ಳಬೇಕಿದೆ ಎಂದು ಮೈಸೂರಿನ ಹೂಟಗಳ್ಳಿ ನಗರಸಭೆ ಪೌರಾಯುಕ್ತ ಚಂದ್ರಶೇಖರ್ ಹೇಳಿದರು.

ಬಿ-ಖಾತೆ ಆರಂಭಗೊಂಡ ಬಳಿಕ ಖಾತೆ ವಿತರಣೆ ಸಂಬಂಧ ಪಾವತಿಸಬೇಕಿದ್ದ ಕಂದಾಯ ವಿಚಾರದಲ್ಲಿ ಗೊಂದಲ ಏರ್ಪಟ್ಟಿದ್ದ ಹಿನ್ನೆಲೆಯಲ್ಲಿ ನಗರಸಭೆ ಕೌನ್ಸಿಲ್ ಸಭೆಯಲ್ಲಿ ಶನಿವಾರ ನಗರಸಭೆ ಸದಸ್ಯರು ಹಾಗೂ ಅಧಿಕಾರಿಗಳಿಗೆ ಆಯೋಜಿಸಿದ್ದ ಬಿ-ಖಾತೆ ತರಬೇತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ನಗರಸಭೆಗೆ ಸೋರಿಕೆ ಆಗುತ್ತಿದ್ದ ಆದಾಯ ವನ್ನು ಗಟ್ಟಿಗೊಳಿಸಲು ಸರ್ಕಾರ ಈ ಸುತ್ತೋಲೆ ಹೊರಡಿಸಿದೆ. ಇದು ಸಂಪತ್ತು ಕ್ರೋಢೀಕರಿಸಲು ಸಹಕಾರಿಯಾಗಲಿದೆ ಎಂದರು.

ಒಂದು ವೇಳೆ ಅನಧಿಕೃತ ಬಡಾವಣೆಯಲ್ಲಿ ನಿವೇಶನ ಹಾಗೂ ಕಟ್ಟಡಗಳಿಗೆ 2023-24 ನೇ ಸಾಲಿನ ವರೆವಿಗೂ ಕಂದಾಯವನ್ನು ಕಟ್ಟಿಸಿಕೊಂಡಿದ್ದರೆ, ಹೊಸ ಸುತ್ತೋಲೆ ಪ್ರಕಾರ 6 ವರ್ಷಗಳ ಟ್ಯಾಕ್ಸ್ ಪರಿಶೀಲನೆ ಮಾಡಬೇಕೆಂಬ ಆದೇಶವಿದೆ. ಹಾಗಾಗಿ ಈ ಆಸ್ತಿಗಳಿಗೆ 2023-24 ನೇ ಸಾಲಿನ ಹಿಂದಿನ 6 ವರ್ಷಕ್ಕೆ ಬಾಕಿ ಉಳಿದ ಸಿಂಗಲ್ ಟ್ಯಾಕ್ಸ್ ಪಡೆಯಬೇಕೆಂದರು. ಇನ್ನು ಗ್ರಾಮ ಠಾಣಾ ವ್ಯಾಪ್ತಿಗೆ ಬರುವ ಅಧಿಕೃತ ಬಡಾವಣೆ ನಿವೇಶನ, ಕಟ್ಟಡಗಳಿಗೆ ಎ-ಖಾತೆ ಪಡೆಯಲು ಮಾತ್ರ ಸಿಂಗಲ್ ಟ್ಯಾಕ್ಸ್ ಕಟ್ಟಿಸಿಕೊಳ್ಳಬೇಕು ಎಂದು ಮಾಹಿತಿ ನೀಡಿದರು.

ನಗರಸಭೆ ಸದಸ್ಯರು ಹಲವು ಪ್ರಶ್ನೆಗಳನ್ನು ಕೇಳುವ ಮೂಲಕ ಗೊಂದಲ ನಿವಾರಣೆ ಮಾಡಿಕೊಂಡರು. ಅನಧಿಕೃತ ಬಡಾವಣೆಯಲ್ಲಿ ಹಿಂದಿನ ಆಸ್ತಿಗಳು, ಹೊಸ ಆಸ್ತಿಗಳಿಗೆ ಯಾವ ರೀತಿ ಕಂದಾಯ ಪಾವತಿ ಮಾಡಬೇಕೆಂದು ಸವಿಸ್ತಾರವಾಗಿ ಚಂದ್ರಶೇಖರ್ ಸಭೆಗೆ ವಿವರಿಸಿದರು.

ನಗರಸಭೆ ಉಪಾಧ್ಯಕ್ಷ ಎ.ಪಿ.ಶಂಕರ್, ಸದಸ್ಯರಾದ ಜಯರಾಜ್, ಮನೋಹರ್, ಶಾಂತರಾಜು, ರಾಮ ಕೃಷ್ಣ, ಜಿ.ಪಿ.ಶಿವಕುಮಾರ್, ಭಾಗ್ಯ, ಕವಿತಾ, ಸುಶೀಲಾ, ಪ್ರಕಾಶ್ ಶಂಕನಪುರ, ನಾಗೇಂದ್ರ, ಶಂಕರ್ ನಾರಾಯಣ ಗುಪ್ತ, ಮಂಜುನಾಥ್, ನಾಸೀರ್ ಶರೀಫ್, ಸುಮ ಸುಬ್ಬಣ್ಣ, ನಾಗಸುಂದ್ರಮ್ಮ, ನಗರಸಭೆ ನಾಮ ನಿರ್ದೇಶನ ಸದಸ್ಯ ಸ್ವಾಮಿ ನಂಜಪ್ಪ, ದೇವ ನಂದ್, ನರಸಿಂಹನ್, ಶಿವಮಲ್ಲು ಭಾಗವಹಿಸಿದ್ದರು. ಜಿಲ್ಲಾ ನಗರಾಭಿವೃದ್ದಿ ಯೋಜನಾಧಿಕಾರಿ ಸುಧಾ, ನಗರಸಭೆ ಅಧ್ಯಕ್ಷೆ ರೇಖಾ, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ಕೊಳ್ಳೇಗಾಲ ನಗರಸಭೆ ಆಯುಕ್ತ ರಮೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net