ಮದ್ದೂರು: ತಾಲೂಕಿನ ತೈಲೂರು ಗ್ರಾಮದ ತೈಲೂರಮ್ಮ ದೇವಸ್ಥಾನದ ಆವರಣದಲ್ಲಿ ಸೆ.11 ರಂದು ಬೆಳಗ್ಗೆ 11 ಗಂಟೆಗೆ ಕಪ್ಪು ತಲೆ ಹುಳು ಬಾಧಿತ ತೆಂಗಿನ ತೋಟದ ರೈತರಿಗೆ ಇಲಾಖೆ ವತಿಯಿಂದ ಕಪ್ಪು ತಲೆ ಹುಳುವಿನ ನಿಯಂತ್ರಣ ಕುರಿತು ತರಬೇತಿ ನೀಡಿ ಉಚಿತವಾಗಿ ಬೇವಿನ ಎಣ್ಣೆಯನ್ನು ವಿತರಿಸುವ ಕಾರ್ಯಕ್ರಮವನ್ನು ಶಾಸಕ ಕೆ.ಎಂ.ಉದಯ್ ಅವರ ನೇತತ್ವದಲ್ಲಿ ಹಮ್ಮಿಕೊಳ್ಳಲಾಗಿದೆ.
ಕೋಡಿಹಳ್ಳಿ, ಅಗರಲಿಂಗನ ದೊಡ್ಡಿ, ತೈಲೂರು, ಬೂದುಗುಪ್ಪೆ, ಮಾದನಾಯಕನಹಳ್ಳಿ, ರುದ್ರಾಕ್ಷಿಪುರ, ನಿಡಘಟ್ಟ ಗ್ರಾಮದ ರೈತರು ತರಬೇತಿ ಕಾರ್ಯಕ್ರಮದಲ್ಲಿ ಹಾಜರಾಗುವಂತೆ ಹಾಗೂ ಬರುವಾಗ ಆಧಾರ್ ಕಾರ್ಡ್ ಮತ್ತು ಆರ್‌ಟಿಸಿಯನ್ನು ತಪ್ಪದೆ ತರುವಂತೆ ರೈತರಲ್ಲಿ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಕೆ.ಎಂ.ರೇಖಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.