ತರಬೇತಿ ಪಡೆದವರು ಸ್ವಯಂ ಉದ್ಯೋಗಿಗಳಾಗಿ

training program kalluru yalaburga koppal women
ಯಲಬುರ್ಗಾ ತಾಲೂಕಿನ ಕಲ್ಲೂರಿನಲ್ಲಿ ಹಿಂದು ಸೇವಾ ಪ್ರತಿಫಿ್ಠಾನದಿಂದ ಉಚಿತ ಕಂಪ್ಯೂಟರ್​ ತರಬೇತಿ ಪಡೆದ ಯುವಕ-ಯುವತಿಯರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಪ್ರತಿಫಿ್ಠಾನದ ರಾಜ್ಯ ಸಂಚಾಲಕ ಸುಧಾಕರ, ತಾಲೂಕು ಸಂಯೋಜಕ ಈರನಗೌಡ ಈಳಿಗೇರ್​, ಪಿಡಿಒ ರೇಣುಕಾ ಟಂಕದ, ಕಚೇರಿ ವ್ಯವಸ್ಥಾಪಕಿ ರೇಣುಕಾ ಹುರುಳಿ ಇದ್ದರು.
Published on

ಕೊಪ್ಪಳ : ಯುವಕ-ಯುವತಿಯರ ಸಬಲೀಕರಣಕ್ಕಾಗಿ ಕಂಪ್ಯೂಟರ್​ ತರಬೇತಿ ನೀಡಲಾಗಿದ್ದು, ಪ್ರತಿಯೊಬ್ಬರೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹಿಂದು ಸೇವಾ ಪ್ರತಿಷ್ಠಾನದ ರಾಜ್ಯ ಸಂಚಾಲಕ ಸುಧಾಕರ ಹೇಳಿದರು.

ಯಲಬುರ್ಗಾ ತಾಲೂಕಿನ ಕಲ್ಲೂರು ಗ್ರಾಮದ ಕಲ್ಲಿನಾಥೇಶ್ವರ ದೇವಾಲಯದ ಸಭಾಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಹಿಂದು ಸೇವಾ ಪ್ರತಿಫಿ್ಠಾನದಿಂದ ಉಚಿತ ಕಂಪ್ಯೂಟರ್​ ತರಬೇತಿ ಪಡೆದ ಯುವಕ-ಯುವತಿಯರಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.

ತರಬೇತಿ ಪಡೆದವರು ಸ್ವಯಂ ಉದ್ಯೋಗಿಗಳಾಗಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು. ಹಿಂದು ಸೇವಾ ಪ್ರತಿಫಿ್ಠಾನ ತಾಲೂಕಿನಲ್ಲಿ ಇಂಥ ಹಲವಾರು ಸಾಮಾಜಿಕ ಕಾಳಜಿ ಹೊಂದಿದ ಕಾರ್ಯಕ್ರಮ ಜಾರಿಗೊಳಿಸಿ ಸಮಾಜದ ಏಳ್ಗೆಗೆ ಶ್ರಮಿಸುತ್ತಿದೆ ಎಂದರು.

ಪಿಡಿಒ ರೇಣುಕಾ ಟಂಕದ ಮಾತನಾಡಿ, ಆಧುನಿಕ ಯುಗದಲ್ಲಿ ಕಂಪ್ಯೂಟರ್​ ಜ್ಞಾನ ಅವಶ್ಯವಿದೆ. ಯುವಕ ಯುವತಿಯರಿಗೆ ಉಚಿತ ಕಂಪ್ಯೂಟರ್​ ತರಬೇತಿ ನೀಡಿದ ಹಿಂದು ಸೇವಾ ಪ್ರತಿಫಿ್ಠಾನದ ಸಮಾಜಮುಖಿ ಕಾರ್ಯ ಶ್ಲಾಘನೀಯ ಎಂದರು.

ಈ ಸಂದರ್ಭ ಪ್ರತಿಫಿ್ಠಾನದ ತಾಲೂಕು ಸಂಯೋಜಕ ಈರನಗೌಡ ಈಳಿಗೇರ್​, ಕಚೇರಿ ವ್ಯವಸ್ಥಾಪಕಿ ರೇಣುಕಾ ಹುರುಳಿ, ಹಿಂದು ಸೇವಾ ಪ್ರತಿಫಿ್ಠಾನದ ಸೇವಾ ಕಾರ್ಯಕರ್ತರು ಸೇರಿದಂತೆ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net