ನೌಕರರು ಉತ್ತಮ ಸೇವೆ ನೀಡಿ:ಎಡಿಸಿ ಸಾವಿತ್ರಿ ಕಡಿ ಸಲಹೆ

training program in koppal ADC Savitri Kadi participate
ಕೊಪ್ಪಳದಲ್ಲಿ ಎ್​ಡಿಎ, ಎಸ್​ಡಿಎಗಳಿಗೆ ಸೋಮವಾರ ಹಮ್ಮಿಕೊಂಡಿದ್ದ ತರಬೇತಿ ಸಮಾರೋಪ ಕಾರ್ಯಕ್ರಮವನ್ನು ಎಡಿಸಿ ಸಾವಿತ್ರಿ ಕಡಿ ಉದ್ಘಾಟಿಸಿದರು. ರಾಜ್ಯ ಸರ್ಕಾರಿ ನೌಕರರ ಸಂದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮನವರ, ತಹಸೀಲ್ದಾರ್​ ವಿಠ್ಠಲ್​ ಚೌಗಲಾ, ನಾಡಾ ತಹಸೀಲ್ದಾರ್​ ರೇಖಾ ದೀತ್​, ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ ಇದ್ದರು.
Published on

ಕೊಪ್ಪಳ: ಸರ್ಕಾರಿ ಸೇವೆಗೆ ಆಯ್ಕೆಯಾದ ನೌಕರರು ಉತ್ತಮ ತರಬೇತಿ ಪಡೆದು ಸಾರ್ವಜನಿಕರಿಗೆ ಸೇವೆ ನೀಡಿ ಎಂದು ಅಪರ ಜಿಲ್ಲಾಧಿಕಾರಿ ಸಾವಿತ್ರಿ ಕಡಿ ಸಲಹೆ ನೀಡಿದರು.

ನಗರದ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಎ್​ಡಿಎ, ಎಸ್​ಡಿಎಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಸಮಾರೋಪ ಸಮಾರಂಭದಲ್ಲಿ ಸೋಮವಾರ ಮಾತನಾಡಿದರು.

ಸೇವೆ ಸಲ್ಲಿಸುವ ಇಲಾಖೆಯಲ್ಲಿನ ಸೇವೆಗಳು, ನೀತಿ, ನಿಯಮಗಳ ಬಗ್ಗೆ ಸರಿಯಾಗಿ ಅರಿತುಕೊಂಡಲ್ಲಿ ಸುಲಭವಾಗಿ ಕೆಲಸ ಮಾಡಬಹುದು. ಶಿಸ್ತು ಮುಖ್ಯ. ಕಚೇರಿಯಲ್ಲಿದ್ದಾಗ ಶಿಸ್ತಿನಿಂದ ಇರಬೇಕು. ಮೇಲಧಿಕಾರಿಗಳೊಂದಿಗೆ ವಿನಯದಿಂದ ವರ್ತಿಸಿ. ಸಮಯ ಪಾಲನೆ, ಅಂದಿನ ಕೆಲಸ ಅಂದೇ ಮುಗಿಸಿ. ಆಸೆ, ಆಮಿಷಗಳಿಗೆ ಒಳಗಾಗದೆ ಕೆಲಸ ಮಾಡಿ. ತರಬೇತಿ ಸರಿಯಾಗಿ ಪಡೆದುಕೊಂಡಲ್ಲಿ ಕೆಲಸವನ್ನು ಉತ್ತಮವಾಗಿ ನಿಭಾಯಿಸಬಹುದು. ತರಬೇತಿ ಪಡೆದು ಸಾರ್ವಜನಿಕ ಸೇವೆಗೆ ಸಿದ್ಧವಾಗಿ ಎಂದರು.

ರಾಜ್ಯ ಸರ್ಕಾರಿ ನೌಕರರ ಸಂದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮನವರ ಮಾತನಾಡಿ, ಸರ್ಕಾರಿ ನೌಕರರು ಎಲ್ಲರೊಂದಿಗೆ ಪ್ರೀತಿ, ವಿಶ್ವಾಸದಿಂದ ಇರಬೇಕು. ಕಚೇರಿ ಕೆಲಸಗಳಲ್ಲಿ ವಿಳಂಬ ಮಾಡಬಾರದು. ಕೆಲಸಗಳನ್ನು ಬಾಕಿ ಉಳಿಸಿಕೊಂಡರೆ, ಸಮಸ್ಯೆಗಳಿಗೆ ಅವಕಾಶ ಮಾಡಿಕೊಟ್ಟಂತೆ. ನಮ್ಮ ಮೇಲೆ ನಾವೇ ಒತ್ತಡ ಹಾಕಿಕೊಂಡಂತಾಗುತ್ತದೆ. ಅಂದಿನ ಕೆಲಸವನ್ನು ಅಂದೇ ಮಾಡಿ ಮುಗಿಸುವ ಪರಿಪಾಠ ಬೆಳೆಸಿಕೊಂಡಲ್ಲಿ ಸುಲಭವಾಗಿ ಕರ್ತವ್ಯ ನಿಭಾಯಿಸಬಹುದು. ತರಬೇತಿಯಲ್ಲಿ ತಿಳಿಸುವ ಪಾಠ, ಮಾರ್ಗದರ್ಶನಗಳನ್ನು ಅರಿತು ಕಚೇರಿಯ ನಿತ್ಯದ ಕಾರ್ಯಗಳಲ್ಲಿ ಅಳವಡಿಸಿಕೊಳ್ಳುವಂತೆ ಕಿವಿಮಾತು ಹೇಳಿದರು.

ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ ಮಾತನಾಡಿ, ನೌಕರರಿಗೆ ಸೇವಾಮನೋಭಾವ ಇರಬೇಕು. ಹೊಸದನ್ನು ಕಲಿಯುವ ಉತ್ಸುಕತೆ ಅವಶ್ಯ. ಕೈಪಿಡಿ ಪ್ರಕಾರ ಕಚೇರಿ ನಿರ್ವಹಿಸಿ. ಕಚೇರಿಗೆ ಬರುವ ಪತ್ರಗಳನ್ನು ಸರಿಯಾಗಿ ಓದಿ ಮುಂದಿನ ಕ್ರಮ ಜರುಗಿಸಬೇಕು ಎಂದರು.

ತರಬೇತಿ ಸಂಸ್ಥೆ ಪ್ರಾಚಾರ್ಯ ಕೃಷ್ಣಮೂರ್ತಿ ದೇಸಾಯಿ ಮಾತನಾಡಿ, ಪ್ರತಿಯೊಬ್ಬ ಸರ್ಕಾರಿ ನೌಕರರಿಗೆ ವೃತ್ತಿ ಬುನಾದಿ ತರಬೇತಿ ಅವಶ್ಯ. ಹೊಸದಾಗಿ ಆಯ್ಕೆಯಾದ ಎ್​ಡಿಎ, ಎಸ್​ಡಿಎಗಳು ತರಬೇತಿಯಲ್ಲಿ ತಿಳಿಸಿದ ವಿಷಯಗಳನ್ನು ಅಳವಡಿಸಿಕೊಳ್ಳಿ. ಪ್ರಾಮಾಣಿಕತೆ, ನಿಷ್ಠೆಯಿಂದ ಕೆಲಸ ಮಾಡಿ ಎಂದು ತಿಳಿಸಿದರು.

ತಹಸೀಲ್ದಾರ್​ ವಿಠ್ಠಲ್​ ಚೌಗಲಾ, ನಾಡಾ ತಹಸೀಲ್ದಾರ್​ ರೇಖಾ ದೀತ್​, ತಹಸೀಲ್ದಾರ್​ ಕಚೇರಿ ಸಿಬ್ಬಂದಿ, ಪ್ರಶಿಕ್ಷಣಾರ್ಥಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net