ಮಕ್ಕಳ ಕಲಿಕೆಗೆ ಶಾಲಾಪೂರ್ವ ಶಿಕ್ಷಣ ಸಹಕಾರಿ

training program alavandi koppal anganavwadi
ಅಳವಂಡಿ ಸಮೀಪದ ಕವಲೂರು ಗ್ರಾಮದಲ್ಲಿ ನಡೆದ ಶಾಲಾಪೂರ್ವ ಶಿಕ್ಷಣ ಬಲವರ್ಧನೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಚಾಲನೆ ನೀಡಲಾಯಿತು, ಅಂಗನವಾಡಿ ಮೇಲ್ವಿಚಾರಕಿ ರೆಹಮತಬೀ, ಬಸಮ್ಮ, ಪ್ರಮುಖರಾದ ನಾಗರಾಜ, ಸಂಜೀವಿನಿ ಒಕ್ಕೂಟದ ಎಮ್​ ಬಿಕೆ ಶಮಿನಾಬಾನು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಇದ್ದರು,
Published on

ಕೊಪ್ಪಳ: ಶಾಲಾ ಪೂರ್ವ ಶಿಕ್ಷಣದಿಂದ ಮಕ್ಕಳ ಭಾಷೆ, ಕಲಿಕೆ ಹಾಗೂ ಬೌದ್ಧಿಕ ಬೆಳವಣಿಗೆ ಸಹಕಾರಿಯಾಗುತ್ತದೆ ಎಂದು ಅಂಗನವಾಡಿ ಮೇಲ್ವಿಚಾರಕಿ ರೆಹಮತಬೀ ತಿಳಿಸಿದರು.

ತಾಲೂಕಿನ ಕವಲೂರು ಗ್ರಾಮದಲ್ಲಿ ಶಿಶು ಅಭಿವೃದ್ಧಿ ಯೋಜನೆಯ ಕವಲೂರು ವಲಯದ ಅಂಗನವಾಡಿ ಕಾರ್ಯಕರ್ತೆಯರಿಗೆ ಹಮ್ಮಿಕೊಂಡಿದ್ದ ತರಬೇತಿ ಶಿಬಿರವನ್ನು ಜ್ಯೋತಿ ಬೆಳಗಿಸಿ ಗುರುವಾರ ಮಾತನಾಡಿದರು.

ಪ್ರತಿ ಅಂಗನವಾಡಿ ಕೇಂದ್ರದಲ್ಲಿಯೂ ಮಕ್ಕಳಿಗೆ ಶಾಲಾ ಪೂರ್ವ ಶಿಕ್ಷಣ ಪ್ರಾರಂಭಿಸಲಾಗಿದೆ. ಇದು ಮಕ್ಕಳ ಸಮಗ್ರ, ಬೆಳವಣಿಗೆಗೆ ಸಹಕಾರಿಯಾಗಲಿದೆ. ಸರಕಾರ ಒದಗಿಸಿದ ಪಾಠೋಪಕರಣಗಳನ್ನು ಬಳಸಿ ಮಕ್ಕಳಿಗೆ ಚಟುವಟಿಕೆ ಮೂಲಕ ಅಭ್ಯಾಸ ಮಾಡಿಸಿ ಎಂದರು.

ಅಂಗನವಾಡಿ ಮೇಲ್ವಿಚಾರಕಿ ಬಸಮ್ಮ ಹಡಪದ ಮಾತನಾಡಿ, ಪ್ರಾಥಮಿಕ ಶಾಲೆಗೂ ಮೊದಲು ಮಕ್ಕಳಿಗೆ ಇಂತಹ ಶಿಕ್ಷಣ ನೀಡುವದರಿಂದ ಅವರ ಮುಂದಿನ ಅಭ್ಯಾಸಕ್ಕೆ ಸಹಕಾರಿಯಾಗುತ್ತದೆ. ಕಾರಣ ಅಂಗನವಾಡಿ ಕಾರ್ಯಕರ್ತೆಯರು ಇಲ್ಲಿ ಪಡೆದ ತರಬೇತಿಯನ್ನು ಮಕ್ಕಳಿಗೆ ನೀಡಿ ಅವರ ಚಿತ್ತವನ್ನು ಓದಿನತ್ತ ವಾಲುವಂತೆ ಮಾಡಿ ಎಂದರು.

ಪ್ರಮುಖರಾದ ನಾಗರಾಜ, ಸಂಜೀವಿನಿ ಒಕ್ಕೂಟದ ಎಮ್​ ಬಿಕೆ ಶಮಿನಾಬಾನು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಇದ್ದರು,

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net