

ಚಿತ್ರದುರ್ಗ: ಚಾಲನಾ ಪರವಾನಗಿ ನವೀಕರಣಕ್ಕಾಗಿ ಸಾರಿಗೆ ಇಲಾಖೆಯ ನಿರ್ಧಾರ ಹೊರೆಯಾಗಿದೆ ಎಂದು ಭಾರೀ ವಾಹನ ಚಾಲಕರು ಅಸಮಾಧಾನ ವ್ಯಕ್ತಪಡಿಸಿದ್ದರೆ,ಅಪಘಾತಗಳ ಸಂಖ್ಯೆ ಕಡಿತಕ್ಕೆ ಈ ತೀರ್ಮಾನ ಸರಿ ಇದೆ ಎಂದು ಇಲಾಖೆ ಸಮರ್ಥಿಸಿದೆ. ಅಪಘಾತಗಳು ಹಾಗೂ ಅವುಗಳಿಂದಾಗುತ್ತಿರುವ ಸಾವು-ನೋವಿನ ಸಂಖ್ಯೆಯಲ್ಲಿ ಕರ್ನಾಟಕ ದೇಶದಲ್ಲೇ 4ನೇ ಸ್ಥಾನದಲ್ಲಿ ಎಂಬ ಕೇಂದ್ರದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಆತಂಕ ವ್ಯಕ್ತಪಡಿಸಿದೆ.
ಈ ಹಿನ್ನೆಲೆಯಲ್ಲಿ ರಾಜ್ಯಸರ್ಕಾರ,ಕರ್ನಾಟಕದಲ್ಲಿ ಅಪಘಾತಗಳ ಸಂಖ್ಯೆ ಕಡಿತಗೊಳಿಸಲು ಮುಂದಾಗಿದೆ. ರಾಜ್ಯದ ಮಂಡ್ಯ,ಚಿತ್ರದು ರ್ಗ,ಹಾಸನ ಮತ್ತಿತರ ಹತ್ತಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ರಸ್ತೆ ಅಪಘಾತ ಸಂಖ್ಯೆ ಹೆಚ್ಚಳವಾಗಿರುವುದು ಕಳವಳಕಾರಿಯಾಗಿದೆ. ಆದ್ದರಿಂದ ಸರ್ಕಾ ರದ ಕಟ್ಟು ನಿಟ್ಟಿನ ಸೂಚನೆ ಮೇರೆಗೆ ಸಾರಿಗೆ ಇಲಾಖೆ ಭಾರೀ ವಾಹನ ಚಾಲಕರ ಪರವಾನಗಿ ನವೀಕರಣಕ್ಕೆ ಒಂದು ದಿನದ ತರಬೇತಿ ಏ ರ್ಪಡಿಸುತ್ತಿದೆ.
ಸುಜ್ಜಿತ ಡ್ರೈವಿಂಗ್ ಟ್ರಾೃಕ್‌ಗಳಿರುವ ಕಲಬುರಗಿ,ಮಂಗಳೂರು,ಧಾರವಾಡ ಹಾಗೂ ಬೆಂಗಳೂರು ಸಿಂಗನಾಯಕನಹಳ್ಳಿಯ ಭಾರೀ ವಾಹನ ಚಾಲಕರ(ಸರಕು,ಪ್ರಯಾಣಿಕರ ವಾಹನಗಳು)ಕೇಂದ್ರಗಳಲ್ಲಿ ಒಂದು ದಿನದ ತರಬೇತಿ ಪ್ರಾರಂಭಿಸಲು ಕಳೆದ ಫೆಬ್ರವರಿಯಲ್ಲಿ ಇ ಲಾಖೆ ಆದೇಶಿಸಿದೆ.
ಇದರ ಸರ್ಟಿಫೀಕೇಟ್‌ನ್ನು ಕಡ್ಡಾಯವಾಗಿ ಪಡೆದವರ ಪರವಾನಗಿ ನವೀಕರಿಸಲಾಗುತ್ತಿದೆ. ಬೆಳಗ್ಗೆ 9ರಿಂದ ಸಂಜೆ 4ವರೆಗಿರುವ ತರಬೇತಿ ಅವಧಿ ಥಿಯರಿ,ಪ್ರಾಕ್ಟಿಕಲ್ ಕ್ಲಾಸ್‌ಗಳಿರುತ್ತವೆ. ತರಬೇತಿಗೆ 800 ರೂ.ಶುಲ್ಕವಿದೆ. ಕಲಬುರಗಿ ಕೇಂದ್ರದ ವ್ಯಾಪ್ತಿಗೆ ಕಲಬುರಗಿ,ಯಾದ ಗಿರಿ,ಬಳ್ಳಾರಿ,ಹೊಸಪೇಟೆ(ವಿಜಯನಗರ)ರಾಯಚೂರು,ಕೊಪ್ಪಳ,ಬೀದರ್ ಜಿಲ್ಲೆಗಳನ್ನು ಸೇರಿಸಲಾಗಿದೆ.
ಮಂಗಳೂರು ಕೇಂದ್ರಕ್ಕೆ ದಕ್ಷಿಣ ಕನ್ನಡ,ಶಿವಮೊಗ್ಗ,ಚಿಕ್ಕಮಗಳೂರು. ಧಾರವಾಡದ ಕೇಂದ್ರಕ್ಕೆ ಬೆಳಗಾವಿ,ಧಾರವಾಡ,ಬಾಗಲಕೋಟೆ, ಉತ್ತರಕನ್ನಡ,ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳನ್ನು ಸೇರಿಸಲಾಗಿದೆ. ಆಯಾ ಜಿಲ್ಲೆಗಳ ಚಾಲಕರು ತಮ್ಮ ವ್ಯಾಪ್ತಿಯ ಕೇಂದ್ರಗಳಲ್ಲಿ ತರಬೇತಿ ನೀಡಲಾಗುತ್ತಿದೆ.
ಇಲಾಖೆ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿ ಈಚೆಗೆ ಚಿತ್ರದುರ್ಗದಲ್ಲಿ ಜಿಲ್ಲೆಯ ಭಾರೀ ವಾಹನ ಚಾಲಕರು ಆರ್‌ಟಿಒ ಅವರಿಗೆ ಮನವಿ ಸಲ್ಲಿಸಿದ್ದರು. ಆದರೆ ಚಾಲನಾ ಕೌಶಲ ಸುಧಾರಿಸಲು ತರಬೇತಿ ಅನಿವಾರ‌್ಯ ಎಂದು ಅಧಿಕಾರಿಗಳು ಹೇಳಿದ್ದು,ಜಿಲ್ಲೆಯಲ್ಲಿ ಈವರೆ ಗೆ ಅಂದಾಜು 150 ತರಬೇತಿ ಪಡೆದ ಚಾಲಕರ ಪರವಾನಗಿ ನವೀಕರಿಸಲಾಗಿದೆ.
3 ಕಡೆ ಹೊಸ ಪರೀಕ್ಷಾ ಪಥಗಳು
ರಾಜ್ಯಸರ್ಕಾರ ಕಳೆದ ತನ್ನ ಬಜೆಟ್‌ನಲ್ಲಿ ರಾಜ್ಯದಲ್ಲಿ 42 ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥಗಳ ಸ್ಥಾಪನೆ ಘೋಷಿಸಿತ್ತು. ಈ ಹಿನ್ನೆಲೆ ಪ್ರಸ್ತುತ ಸಾಲಿನಲ್ಲಿ ಹೊನ್ನಾವರ,ಚಾಮರಾಜನಗರ ಮತ್ತು ಚಿತ್ರದುರ್ಗದಲ್ಲಿ ಅಂದಾಜು 22.50 ಕೋಟಿ ರೂ.ವೆಚ್ಚದಲ್ಲಿ ಸ್ವಯಂ ಚಾಲಿತ ಚಾಲನ ಪರೀಕ್ಷಾ ಪಥಗಳನ್ನು ನಿರ್ಮಿಸಲಾಗುತ್ತಿದೆ.
ಚಿತ್ರದುರ್ಗದ ಆರ್‌ಟಿಒ ಕಚೇರಿ ಆವರಣದಲ್ಲಿ ಹೊಸ ಪಥ ನಿರ್ಮಾಣಕ್ಕೆ 7.50 ಕೋಟಿ ರೂ.ಮಂಜೂರಾಗಿದೆ. ಅಂದಾಜು 4.50 ಎಕರೆ ವಿಸ್ತೀರ್ಣದಲ್ಲಿ,ಆರ್‌ಟಿಒ ಕಚೇರಿ ಕಟ್ಟಡ ಹಾಗೂ ಡ್ರೈವಿಂಗ್ ಟೆಸ್ಟ್ ಟ್ರಾೃಕ್ ಇದೆ. ಈಗ ಟ್ರಾೃಕ್ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥವಾಗಲಿದೆ. ಹೊಸಪಥಕ್ಕಾಗಿ ಅಂದಾಜು 10 ಎಕರೆ ಜಾಗದ ಹುಡಕಾಟದಲ್ಲಿದ್ದ ಇಲಾಖೆ ಅಧಿಕಾರಿಗಳು,ಕೈಗೂಡ ಕಾರ ಣಕ್ಕೆ ಕಚೇರಿ ಆ ವರಣದಲ್ಲೇ ನಿರ್ಮಿಸಲು ಮುಂದಾಗಿದ್ದಾರೆ ಹಾಗೂ ಕಚೇರಿಗೂ ಹೊಸ ಕಟ್ಟಡ ನಿರ್ಮಿಸಲು ಉದ್ದೇಶಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದ 3 ವರ್ಷಗಳಲ್ಲಾದ ಅಪಘಾತಗಳಲ್ಲಿ ಸಾವು ನೋವು
ಇಸವಿ- ಸಾವು-ಗಾಯಾಳು ಸಂಖ್ಯೆ
2022-415-2747
2023-472-2634
2024-432-2467
-------------------
ಕೋಟ್
ಚಿತ್ರದುರ್ಗದಲ್ಲೇ ಕಳೆದ 35 ವರ್ಷಗಳಿಂದ ಭಾರೀ ವಾಹನ ಚಾಲಕರ ಪರವಾನಗಿ ನವೀಕರಿಸಲಾಗುತ್ತಿತ್ತು. ಆದರೆ ಅಪಘಾತಗಳ ಸಂಖ್ಯೆ ಕಡಿತಗೊಳಿಸಲು ಈಗ ಒಂದು ದಿನದ ತರಬೇತಿ ಕೊಡಲಾಗುತ್ತಿದೆ. ನವೀಕರಣಕ್ಕೆ ತರಬೇತಿ ಸರ್ಟೀಫಿಕೇಟ್ ಕಡ್ಡಾಯ. ಇದು ಚಾ ಲಕರಿಗೆ ಆರ್ಥಿಕವಾಗಿ ಹೊರೆ ಎಂಬ ಅಸಮಾಧಾನವಿದ್ದರೂ ಅಪಘಾತಗಳ ಸಂಖ್ಯೆ ಕುಗ್ಗಿಸಲು ಈ ಕ್ರಮ ಅನಿವಾರ‌್ಯ. ದುರ್ಗದಲ್ಲಿ ಹೊಸ ಸ್ವಯಂ ಚಾಲನಾ ಪರೀಕ್ಷಾ ಪಥ ನಿರ್ಮಾಣವಾಗುತ್ತಿದೆ.
ಭರತ ಎಂ.ಕಾಳಿಸಿಂಗೆ,ಆರ್‌ಟಿಒ,ಚಿತ್ರದುರ್ಗ
----