

ರಾಯಚೂರು ಉದ್ಯಮಶೀಲತಾಭಿವೃದ್ಧಿ ತರಬೇತಿಯಲ್ಲಿ ಭಾಗವಹಿಸಿದ ನಂತರ ಸಣ್ಣ ಸಣ್ಣ ಉದ್ಯಮಗಳನ್ನು ಪ್ರಾರಂಭಿಸಿ ಅವುಗಳನ್ನು ಸರಿಯಾಗಿ ನಡೆಸಿ ಮುಂದೆ ದೊಡ್ಡ-ದೊಡ್ಡ ಉದ್ಯಮಗಳನ್ನಾಗಿ ಪರಿರ್ವತನೆ ಮಾಡಲು ಉದ್ಯಮಶೀಲರು ಪ್ರಯತ್ನ ಮಾಡಬೇಕು ಎಂದು ಕೃಷಿ ವಿಜÁ್ಞನಗಳ ವಿಶ್ವವಿದ್ಯಾಲಯದ ಕುಲಸಚಿವ ಡಾ.ಗುರುರಾಜ ಸುಂಕದ ಭಾವಿ ಉದ್ಯಮಶೀಲರುಳಿಗೆ ಕಿವಿ ಮಾತು ಹೇಳಿದರು.
ನಗರದ ಕೃಷಿ ವಿಜÁ್ಞನಗಳ ವಿಶ್ವವಿದ್ಯಾಲಯದ ಸಾವಯವ ಕೃಷಿ ಸಂಶೋಧನಾ ಸಂಸ್ಥೆಯ ಸಮ್ಮೇಳನ ಸಭಾಂಗಣದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ರಾಷ್ಟಿçÃಯ ಜೀವನೋಪಾಯ ಅಭಿಯಾನದ ಸ್ವ-ಸಹಾಯ ಸಂಘದ ಸದಸ್ಯರುಗಳಿಗೆ ಸಂಕಲ್ಪ ಯೋಜನೆ ಅಡಿ ೫ ದಿನಗಳ ಹಾಗೂ ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ ಸಿಡಾಕ್ ವತಿಯಿಂದ ಐದು ದಿನಗಳ ಉದ್ಯಮಶೀಲತಾಭಿವೃದ್ಧಿ ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳಿಗೆ ಮಂಗಳವಾರ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡಿದರು.
ಈ ತರಬೇತಿಯಿಂದಾಗಿ ಉದ್ಯಮಕ್ಕೆ ಸಹಾಯ ಸಹಕಾರ, ಉದ್ಯಮದಿಂದ ಬರುವ ಕುಂದು ಕೊರತೆಗಳು, ಮಾರುಕಟ್ಟೆ ಬಗ್ಗೆ ತಿಳಿವಳಿಕೆ ಸೇರಿದಂತೆ ಅನೇಕ ವಿಷಯಗಳನ್ನು ತಿಳಿದುಕೊಳ್ಳಲು ಸಾಧ್ಯವಾಗಿದೆ ಎಂದರು.
ಕೌಶಲ್ಯಾಭಿವೃದ್ಧಿ ಅಽಕಾರಿ ಜಿ.ಯು.ಹುಡೇದ್ ಮಾತನಾಡಿ,
ಈ ತರಬೇತಿಯಿಂದ ತಾವೇಲ್ಲರೂ ಯಾವುದಾದರು ಒಂದು ಉದ್ಯಮದಲ್ಲಿ ತೊಡಗಿಸಿಕೊಂಡು ಕುಟುಂಬದ ಬಲವರ್ಧನೆಗೆ ಅನುಕೂಲವಾಗುವದರ ಜತೆಗೆ ಸ್ವಯಂ ಉದ್ಯೋಗಕ್ಕೆ ಇರುವ ಸರ್ಕಾರದ ಯೋಜನೆಗಳು, ಬ್ಯಾಂಕ್ ವ್ಯವಹಾರ ಮಾಡುವ ಬಗ್ಗೆ, ಹಣಕಾಸು ಹಾಗೂ ಹಣಕಾಸೇತರ ಸೌಲಭ್ಯಗಳ ಬಗ್ಗೆ, ಲೆಕ್ಕ ಪತ್ರ ನಿರ್ವಹಣೆ, ಯೋಜನಾ ವರದಿ ತಯಾರಿಕೆ, ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸುವಲ್ಲಿ ಸಹಾಯ ನೀಡುವುದು, ಈ ಮೂಲಕ ಮಹಿಳೆಯರು ಆರ್ಥಿಕವಾಗಿ ಸಬಲೀಕರಣಗೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಜಿಲ್ಲಾ ಅಽಕಾರಿ ರಾಯಣ್ಣ ಕೆ, ಡಾ.ಬಸವಣ್ಣಪ್ಪ ,ಸುರೇಶ, ರಸೂಲ್ ಸಾಬ್, ಶಾಂತಾ ಮನೋಹರ ಸೇರಿ ಅನೇಕರು ಇದ್ದರು.