ಸ್ಪರ್ಧಾತ್ಮಕ ಪರೀಕ್ಷೆ,ಯಶಸ್ವಿಗೆ ನಿರಂತರ ಅಧ್ಯಯನ,ತರಬೇತಿ ಅಗತ್ಯ

DSC_0767-777
Published on

ಚಿತ್ರದುರ್ಗ: ಸ್ಪರ್ಧಾತ್ಮಕ ಪರೀಕ್ಷೆಗಳ ಯಶಸ್ವಿಗೆ ನಿರಂತರ ಅಧ್ಯಯನ ಹಾಗೂ ಸೂಕ್ತ ತರಬೇತಿ ಅಗತ್ಯವಿದೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.ನಗರದ ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್,ಪೇ ಬ್ಯಾಕ್ ಟು ಸೊಸೈಟಿ 60 ದಿನಗಳ ಕಾಲ ಆಯೋಜಿಸಿರುವ ಕಾನ್ಸ್‌ಸ್ಟೇಬಲ್ ನೇಮಕ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿಗೆ ಸೋಮವಾರ ಸರ್ಕಾರಿ ಕಲಾ ಕಾಲೇಜಿನಲ್ಲಿ ಚಾಲನೆ ನೀಡಿ ಮಾತನಾಡಿದರು.

ವಿದ್ಯಾಭ್ಯಾಸದಲ್ಲಿ ಶ್ರದ್ಧೆ ಮುಖ್ಯ,ಶ್ರದ್ಧೆಯಿಂದ ಕಲಿತ ವಿದ್ಯೆಯಿಂದ ನೌಕರಿ ದೊರೆಯುವಂತಾಗಲು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಇಂದು ಯಶಸ್ವಿಯಾಗ ಬೇಕಿದೆ.ಈ ನಿಟ್ಟಿನಲ್ಲಿ ವಿದ್ಯಾರ್ಥಿ ಪರಿಷತ್ ಬಡ ವಿದ್ಯಾರ್ಥಿಗಳಿಗೆ ತರಬೇತಿ ಏರ್ಪಡಿಸುವ ಮೂಲಕ ಉತ್ತಮ ಮಾರ್ಗ ದರ್ಶನ ನೀಡುತ್ತಿದೆ. ಕಾನ್ಸ್‌ಸ್ಟೇಬಲ್ ಹುದ್ದೆಯೊಂದೇ ಅಲ್ಲ,ಕೆಎಎಸ್,ಐಎಎಸ್ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಪಾಸಾಗುವ ಗುರಿ ನಿಮ್ಮದಾಗಿರಬೇಕು.

ಡಾ.ಬಿ.ಆರ್.ಅಂಬೇಡ್ಕರ್ ಅವರು ಕೊಟ್ಟಿರುವ ಸಂವಿಧಾನ ಎಲ್ಲರಿಗೂ ಸಮಾನ ಅವಕಾಶಗಳನ್ನು ಒದಗಿಸಿದೆ. ಅಂಬೇಡ್ಕರ್ ಆಶಯ ಗಳ ಜಾರಿಗಾಗಿ ಹಾಗೂ ಬಡವರಿಗೆ,ಹಿಂದುಳಿದ ಸಮಾಜಗಳಿಗೆ ನ್ಯಾಯ ಒದಗಿಸಲು ,ಪ್ರೊ.ಬಿ.ಕೃಷ್ಣಪ್ಪ ಅವರ ನೇತೃತ್ವದಲ್ಲಿ ಸಾಕಷ್ಟು ಹೋರಾಟಗಳಾಗಿವೆ.

ಆರ್‌ಟಿಇ ಸೀಟು ಹಂಚಿಕೆ ನೀತಿಯಲ್ಲಿ ಬದಲಾವಣೆ ಆಗಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಶಾಸಕರು,ಪರಿಶಿಷ್ಟ ಜಾತಿ,ಪಂ ಗಡದವರು ಸೇರಿದಂತೆ ಯುವಜನರು ಇಂದು ಉದ್ಯಮಗಳ ಸ್ಥಾಪನೆ ಕಡೆಯೂ ಗಮನ ಹರಿಸಬೇಕು. ಮೀಸಲು ಸೌಲಭ್ಯವನ್ನು ಪಡೆದವರು ಸಮಾಜಕ್ಕೆ ಕೊಡುಗೆ ನೀಡಬೇಕು. ಹೆತ್ತವರನ್ನು ಎಂದಿಗೂ ಕಡೆಗಣಿಸಬಾರದೆಂದು ಯುವಜನರಿಗೆ ಕಿವಿ ಮಾತು ಹೇಳಿ ದರು.

ಪರಿಷತ್ ಜಿಲ್ಲಾಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಮಾತನಾಡಿ,ನಮ್ಮ ಈ ಪರಿಷತ್ ಬಡ ವಿದ್ಯಾರ್ಥಿಗಳಿಗೆ ಸರ್ಕಾರದ ಸೌಲಭ್ಯ ತಲುಪಿಸುವ ಹಾಗೂ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಅವುಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ತರಬೇತಿಗೆ ಶಾಸಕ ತಿಪ್ಪಾರೆಡ್ಡಿ ಅವರು ಬೆನ್ನೆಲುಬಾಗಿ ನಿಂತಿದ್ದಾರೆ. 120 ಮಕ್ಕಳಿಗೆ,ಊಟ,ವಸತಿ ವ್ಯವಸ್ಥೆಯೊಂದಿಗೆ 3 ಸಾವಿರ ಸ್ಪರ್ಧಾತ್ಮಕ ಪುಸ್ತಕಗಳನ್ನು ಕೊಟ್ಟಿ ದ್ದಾರೆ. ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ಅವರು ಕೂಡ ಈ ತರಬೇತಿಗೆ ಸಾಥ್ ನೀಡಿದ್ದಾರೆ ಎಂದರು.

ಪ್ರಾಂಶುಪಾಲರಾದ ಆರ್.ರಂಗಪ್ಪ,ಪ್ರಾಂಶುಪಾಲ ಸಿದ್ದಲಿಂಗಮ್ಮ,ನಿವೃತ್ತ ಡಿಡಿಪಿಯು ಶಿವಕುಮಾರ್,ಜಿಪಂ ಸದಸ್ಯ ಬಿ.ಪಿ.ಪ್ರಕಾಶ್ ಮೂರ್ತಿ,ಪ್ರೊ.ಲಿಂಗಪ್ಪ,ಡಿಡಿಪಿಯು ರಾಜು,ಸಂಸದರ ಅಪ್ತ ಸಹಾಯಕ ಮೋಹನ್,ನಿವೃತ ತೋಟಗಾರಿಕೆ ಅಧಿಕಾರಿ ಚಂದ್ರಪ್ಪ, ಪ್ರಾಧ್ಯಪಕ ಪಿ.ಎಸ್.ಗಂಗಾಧರ್,ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಮಲೇಶ್,ವಕೀಲರಾದ ಶರಣಪ್ಪ,ಜಯಪ್ಪ,ನರಹರಿ,ಉಪನ್ಯಾಸಕ ಬಿ.ಎಂ.ಗುರುನಾಥ್,ಪ್ರೊ.ನಾಗರಾಜ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net