ವ್ಯಕ್ತಿತ್ವ ವಿಕಸನಕ್ಕೆ ತರಬೇತಿ ಸಹಕಾರಿ

The-Bharat-Scouts-And-Guides
Published on

ಸಿದ್ದಾಪುರ: ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಪ್ರತಿ ಶಾಲಾ ಹಂತದಲ್ಲಿ ನೀಡುವಂತಾದರೆ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿ ಆಗುತ್ತದೆ. ವಿದ್ಯಾರ್ಥಿಗಳಲ್ಲಿ ಶಿಸ್ತು, ದೇಶಪ್ರೇಮ ಹಾಗೂ ಸಹಕಾರ ಮನೋಭಾವವನ್ನು ನಿರೂಪಿಸಲು ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಐ. ನಾಯ್ಕ ಗೋಳಗೋಡ ಹೇಳಿದರು.

ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ತಾಲೂಕು ಸಮಿತಿಯಿಂದ ಸ್ಕೌಟ್ಸ್ ಮಾಸ್ಟರ್ಸ್, ಗೈಡ್ಸ್ ಕ್ಯಾಪ್ಟನ್ಸ್​ಗಳಿಗೆ ಗುರುವಾರ ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತ ಸ್ಕೌಟ್ಸ್ ಮತ್ತು ಗೈಡ್ಸ್​ನ ತಾಲೂಕು ಸಮಿತಿ ಅಧ್ಯಕ್ಷ ಜಿ.ಜಿ. ಹೆಗಡೆ ಬಾಳಗೋಡ ಅಧ್ಯಕ್ಷತೆ ವಹಿಸಿದ್ದರು.

ಭಾರತ ಸ್ಕೌಟ್ಸ್ ಮತ್ತು ಗೈಡ್ಸ್​ನ ಜಿಲ್ಲಾ ಆಯುಕ್ತ ಎಂ.ಎಂ. ಭಟ್ಟ ಶಿರಸಿ, ವಿ.ಎಚ್. ಭಟ್ಕಳ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಎಂ.ವಿ. ನಾಯ್ಕ ಹೆಗ್ಗೇರಿ, ಪ್ರಾ.ಶಾ.ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಸತೀಶ ಹೆಗಡೆ, ಸಹಾಯಕ ರಾಜ್ಯ ಸಂಘಟನಾ ಆಯುಕ್ತ ವೀರೇಶ ಮಾದರ, ಜಿಲ್ಲಾ ಕಾರ್ಯದರ್ಶಿ ಪಿ.ಕೆ. ನಾಯ್ಕ ನಾಣಿಕಟ್ಟಾ, ಗೈಡ್ಸ್ ಜಿಲ್ಲಾ ಆಯುಕ್ತೆ ಶೋಭಾ ಡಿ.ಸಿ., ಮುಖ್ಯಾಧ್ಯಾಪಕ ಮಂಜುನಾಥ ಮಾತನಾಡಿದರು. ಅಂತಾರಾಷ್ಟ್ರೀಯ ಜಾಂಬೋರೆಟ್​ದಲ್ಲಿ ಸಹಕರಿಸಿದ ಪ್ರತಿಭಾ ನಿಲೇಕಣಿ, ಮಂಜುನಾಥ ನಾಯ್ಕ, ಪ್ರೇಮಲತಾ, ವಾಸಂತಿ ಮೊಗೇರ್ ಅವರನ್ನು ಸನ್ಮಾನಿಸಲಾಯಿತು.

ಗಣಪತಿ ನಾಯ್ಕ ವರದಿ ವಾಚಿಸಿದರು. ತಾಲೂಕು ಸಮಿತಿ ಕಾರ್ಯದರ್ಶಿ ಜಿ.ಜಿ. ಹೆಗಡೆ ಮಕ್ಕಿಗದ್ದೆ, ವಿ.ಟಿ. ನಾಯ್ಕ ಗೋಳಗೋಡ ಹಾಗೂ ಖಜಾಂಚಿ ಮಹೇಶ ಶೇಟ್ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net