ರಾಜ್ಯದಲ್ಲಿ ಮಾಂಸ ಉತ್ಪಾದನೆ ಕುಂಠಿತ: ಮುಖ್ಯಪಶುವೈದ್ಯಾಕಾರಿ ಡಾ.ಎಚ್.ಡಿ.ರಮೇಶ್‌ರಾಜು ಹೇಳಿಕೆ

DSC_0028
Published on

ಮಂಡ್ಯ: ಕರ್ನಾಟಕದಲ್ಲಿ ಸುಮಾರು 1 ಕೋಟಿ ಸಂಖ್ಯೆಯಲ್ಲಿ ಕುರಿ ಮತ್ತು 70 ಲಕ್ಷದಷ್ಟು ಮೇಕೆಗಳಿವೆ. ಆದರೂ ಮಾಂಸದ ಉತ್ಪಾದನೆ ಕುಂಠಿತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪಶುಸಂಗೋಪನೆಗೆ ಹೆಚ್ಚು ಒತ್ತು ನೀಡುವುದು ಮುಖ್ಯವಾಗಬೇಕು ಎಂದು ಮುಖ್ಯಪಶುವೈದ್ಯಾಕಾರಿ ಡಾ.ಎಚ್.ಡಿ.ರಮೇಶ್‌ರಾಜು ಮನವಿ ಮಾಡಿದರು.

ನಗರದ 1ನೇ ವಾರ್ಡ್‌ನ ಪಶುವೈದ್ಯಕೀಯ ಪಾಲಿ ಕ್ಲಿನಿಕ್ ಆವರಣದಲ್ಲಿ ಜಿಲ್ಲಾ ಪಂಚಾಯಿತಿ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಆಯೋಜಿಸಿದ್ದ ಕುರಿ ಮತ್ತು ಮೇಕೆ ಸಾಕಾಣಿಕೆ ಬಗ್ಗೆ ರೈತರಿಗೆ ಎರಡು ದಿನದ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಆಡು, ಕುರಿ, ಕೋಳಿ, ಹಂದಿ ಸಾಕಾಣಿಕೆಯಲ್ಲಿ ಅತಿವೃಷ್ಟಿ ಅಥವಾ ಅನಾವೃಷ್ಟಿಯಾದರೆ ಯಾವುದೇ ನಷ್ಟವಾಗುವುದಿಲ್ಲ. ಎಲ್ಲ ಕಾಲದಲ್ಲಿಯೂ ಈ ಪಶುಸಂಗೋಪನೆ ಉದ್ಯಮವು ಉತ್ತಮವಾಗಿದೆ. ಹಾಗಾಗಿ ರೈತರು ಹೆಚ್ಚಾಗಿ ಈ ಉದ್ಯಮದಲ್ಲಿ ತೊಡಗಬೇಕು. ಜತೆಗೆ ಗೊಬ್ಬರ ಉತ್ಪಾದನೆಯು ಸಹ ಹೆಚ್ಚಾಗುತ್ತದೆ ಎಂದು ಸಲಹೆ ನೀಡಿದರು.

ಪಾಲಿಕ್ಲಿನಿಕ್ ಉಪನಿರ್ದೇಶಕ ಡಾ.ಸಿದ್ದರಾಮು, ಡಾ.ಎಸ್.ಯೋಗೇಶ್‌ಗೌಡ, ಡಾ.ಮಿಥುನ್‌ರಾಜ್, ಡಾ.ಬಿ.ಎಸ್.ಚೈತ್ರಾ, ಡಾ.ಸಂತೋಷ್‌ಬಾಬು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net