ಎಂಎಸ್‌ಪಿಸಿ ಸಂಸ್ಥೆ ಸದಸ್ಯರಿಗೆ ತರಬೇತಿ

 ಕೂಡಿಗೆಯ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಭಾಂಗಣದಲ್ಲಿ ಎಂಎಸ್‌ಪಿಸಿ ಸಂಸ್ಥೆ ಸದಸ್ಯರಿಗೆ ಪುನಶ್ಚೇತನ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿತ್ತು. ದೇವಿ.ಬಿ.ಮುಧೋಳ, ಸಾವಿತ್ರವ್ವ, ಎ.ಐ.ಮಂಜುನಾಥ ಇತರರು ಇದ್ದರು.
ಕೂಡಿಗೆಯ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಭಾಂಗಣದಲ್ಲಿ ಎಂಎಸ್‌ಪಿಸಿ ಸಂಸ್ಥೆ ಸದಸ್ಯರಿಗೆ ಪುನಶ್ಚೇತನ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿತ್ತು. ದೇವಿ.ಬಿ.ಮುಧೋಳ, ಸಾವಿತ್ರವ್ವ, ಎ.ಐ.ಮಂಜುನಾಥ ಇತರರು ಇದ್ದರು.
Published on

 ಕುಶಾಲನಗರ: ಶಿಶು ಅಭಿವೃದ್ಧಿ ಯೋಜನಾ ಇಲಾಖೆ, ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಅಂಗನವಾಡಿ ಫಲಾನುಭವಿಗಳಿಗೆ ಪೂರೈಕೆಯಾಗುವ ಪೂರಕ ಪೌಷ್ಟಿಕ ಆಹಾರ ಪದಾರ್ಥ ತಯಾರಿಸುವ ಎಂಎಸ್‌ಪಿಸಿ ಸಂಸ್ಥೆ ಸದಸ್ಯರಿಗೆ ಪುನಶ್ಚೇತನ ತರಬೇತಿ ಕಾರ್ಯಾಗಾರವನ್ನು ಕೂಡಿಗೆಯ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ತರಬೇತಿಗೆ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ದೇವಿ.ಬಿ.ಮುಧೋಳ ಚಾಲನೆ ನೀಡಿದರು. ಜಿಲ್ಲೆಯ ಆಹಾರ ಸುರಕ್ಷತೆ ವಿಭಾಗದ ನಿಯೋಜಿತ ಅಧಿಕಾರಿ ಎ.ಐ.ಮಂಜುನಾಥ ಅವರು ಎಂಎಸ್‌ಪಿಸಿ ಮತ್ತು ಎಡಬ್ಲುೃಸಿಯಲ್ಲಿ ಆಹಾರ ಗುಣಮಟ್ಟ ಕಾಯ್ದೆ ಅಡಿ ಪೂರಕ ಪೌಷ್ಟಿಕ ಆಹಾರ ಪದಾರ್ಥಗಳ ನಿರ್ವಹಣೆ ಕುರಿತು ಸವಿಸ್ತಾರವಾದ ಮಾಹಿತಿ ನೀಡಿದರು.

ಕುಶಾಲನಗರ ಆರೋಗ್ಯ ಇಲಾಖೆಯ ಮಕ್ಕಳ ತಜ್ಞ ಡಾ.ಶಿವಕುಮಾರ್ ಅವರು, ಬಾಣಂತಿಯರು ಮತ್ತು ಮಕ್ಕಳ ಪೌಷ್ಟಿಕ ಆಹಾರದ ಬಗ್ಗೆ ತರಬೇತಿ ನೀಡಿದರು.

ಮೈಸೂರಿನ ವಿಭಾಗೀಯ ಪ್ರತಾಗಾರ ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿ, ಹಿರಿಯ ಸಹಾಯಕ ನಿರ್ದೇಶಕ ಎಚ್.ಎಲ್.ಮಂಜುನಾಥ ಅವರು ಕಚೇರಿಯ ಪತ್ರಗಳ ರೆಕಾರ್ಡ್ ರೂಂನ ನಿರ್ವಹಣೆ ಕುರಿತು ತರಬೇತಿ ಒದಗಿಸಿದರು. ತರಬೇತಿ ಕಾರ್ಯಾಗಾರದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀದೇವಿ ಬಿ.ಮುಧೋಳ, ಮೇಲ್ವಿಚಾರಕಿ ಸಾವಿತ್ರವ್ವ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net