

ಬ್ರಹ್ಮಾವರ: ಬ್ರಹ್ಮಾವರ ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಅರಿವು ಕೇಂದ್ರದ ಸಲಹಾ ಸಮಿತಿ ಸದಸ್ಯರಿಗೆ ಕಳೆದ 7 ದಿನಗಳಿಂದ ನಡೆಯುತ್ತಿದ್ದ ಹೈಬ್ರಿಡ್ ಮುಖಾಮುಖಿ ತರಬೇತಿ ಕಾರ್ಯಕ್ರಮ ಗುರುವಾರ ಮುಕ್ತಾಯಗೊಂಡಿತು.
ತಾಲೂಕಿನ 27 ಗ್ರಾಮ ಪಂಚಾಯಿತಿಯ ಅರಿವು ಕೇಂದ್ರಗಳಿಂದ ಗ್ರಾಮದ ಶಿಕ್ಷಣ ತಜ್ಞರು, ಯುವಕ, ಯುವತಿ ಮಂಡಳಿ ಸದಸ್ಯರು, ಹಿರಿಯ ನಾಗರಿಕರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ವಿದ್ಯಾರ್ಥಿಗಳು, ಬರಹಗಾರು, ಸಾಹಿತಿ, ಕವಿಗಳು ಸೇರಿದಂತೆ 300ಕ್ಕೂ ಹೆಚ್ಚು ಸದ್ಯಸ್ಯರಿಗೆ ಪ್ರತಿ ದಿನ ತರಬೇತಿ ನೀಡಲಾಯಿತು.
ಬ್ರಹ್ಮಾವರ ತಾಪಂ ಇಒ ಎಚ್.ವಿ.ಇಬ್ರಾಹಿಂಪುರ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿ ತರಬೇತಿಯ ಉದ್ದೇಶ ಬಗ್ಗೆ ತಿಳಿಸಿದರು. ಮೈಸೂರು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ತರಬೇತುದಾರರಾದ ತಾರಾ ಪ್ರಭಾಕರ, ಲತಾ ಅಶೋಕ್ ತರಬೇತಿ ನೀಡಿದರು. ಗ್ರಾಮೀಣಾಭಿವೃದ್ಧಿ ಆಯುಕ್ತೆ ಡಾ.ಅರುಂಧತಿ ಚಂದ್ರಶೇಖರ ಮತ್ತು ಉವಾ ಮಹದೇವನ್ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿದ್ದರು.