

ಮಂಡ್ಯ: ಜಿಲ್ಲೆಯಲ್ಲಿರುವ ಸಫಾಯಿ ಕರ್ಮಚಾರಿ ಆಯೋಗದಿಂದ ಗುರುತಿಸಲ್ಪಟ್ಟು ಗುರುತಿನ ಚೀಟಿ ಪಡೆದಿರುವ 18 ರಿಂದ 35 ವಯೋಮಾನದೊಳಗಿನ ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಅಥವಾ ಅವರ ಕುಟುಂಬಸ್ಥರಿಗೆ ಕೌಶಲ ತರಬೇತಿ ನೀಡಲಾಗುತ್ತಿದೆ.
ಆಸಕ್ತರು ಮಾಹಿತಿಗಾಗಿ ನಗರದ ಬಂದೀಗೌಡ ಲೇಔಟ್‌ನಲ್ಲಿರುವ ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಕಛೇರಿ ಅಥವಾ ದೂ.ಸಂ 08232-295010, ಮೊ.ಸಂ 8073264498 ಅನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.