

ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ
ದೇಹಕ್ಕೆ ವ್ಯಾಯಾಮ ನೀಡುವುದರೊಂದಿಗೆ ಆರೋಗ್ಯ ಸಮೃದ್ಧಿಗೆ ಈಜು ಬಹಳ ಅಗತ್ಯ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈಜು ಸ್ಪರ್ಧೆ ಹೆಚ್ಚಿನ ಮಹತ್ವ ಪಡೆದಿರುವುದರಿಂದ ತರಬೇತಿ ಪಡೆದ ಮಕ್ಕಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಲು ಶ್ರಮ ವಹಿಸಬೇಕು ಎಂದು ಭಾರತ ಸೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಮುಖ್ಯ ಆಯುಕ್ತ ಟಿ.ಜಿ.ಆರ್.ಸಿಂಧ್ಯಾ ಹೇಳಿದರು.
ಜೆಸಿಐ ಪಂಜ ಪಂಚಶ್ರೀ ಮತ್ತು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಪಂಜ ಘಟಕ ಆಶ್ರಯದಲ್ಲಿ ಯೇನೆಕಲ್ಲು ಹೊಳೆಯಲ್ಲಿ ನಡೆಯುವ ರಾಜ್ಯಮಟ್ಟದ ಈಜು ತರಬೇತಿ ಶಿಬಿರವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.
ಜೆಸಿಐ ಪಂಜ ಪಂಚಶ್ರೀ ಅಧ್ಯಕ್ಷ ವಾಚಣ್ಣ ಕೆರೆಮೂಲೆ ಅಧ್ಯಕ್ಷತೆ ವಹಿಸಿದ್ದರು. ಪಿ.ಜಿ.ಆರ್.ಸಿಂಧ್ಯಾ ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಗೈಡ್ಸ್ ಆಯುಕ್ತೆ ವಿಮಲಾ ರಂಗಯ್ಯ, ತಾ.ಪಂ. ನಿಕಟಪೂರ್ವ ಸದಸ್ಯ ಅಶೋಕ್ ನೆಕ್ರಾಜೆ, ಜೇಸಿಸ್‌ನ ಕಾರ್ಯಕ್ರಮ ವಿಭಾಗದ ವಲಯ ನಿರ್ದೇಶಕ ಕಾಶೀನಾಥ್ ಗೋಗಟೆ, ಅಂತಾರಾಷ್ಟ್ರೀಯ ಈಜು ತರಬೇತುದಾರ ಯಶವಂತ ಬಿ.ಮುಖ್ಯ ಅತಿಥಿಗಳಾಗಿದ್ದರು.
70ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಜೇಸಿ ವಲಯ ಸಂಯೋಜಕ ಲೋಕೇಶ್ ಆಕ್ರಿಕಟ್ಟೆ, ಪಂಜ ಜೇಸಿಸ್ ಸ್ಥಾಪಕಾಧ್ಯಕ್ಷ ದೇವಿಪ್ರಸಾದ್ ಜಾಕೆ, ಕಾರ್ಯದರ್ಶಿ ಅಶ್ವಥ್ ಬಾಬುಬೆಟ್ಟು, ಕಾರ್ಯಕ್ರಮ ನಿರ್ದೇಶಕ ಗಗನ್ ತೆಂಕಪಾಡಿ, ಭಾರತ್ ಸೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಮಾಧವ ಬಿ.ಕೆ., ಕಾರ್ಯದರ್ಶಿ ಉದಯ ಕುಮಾರ್ ರೈ ಎಸ್.ಬಾಳಿಲ, ಉಪಾಧ್ಯಕ್ಷರಾದ ದಾಮೋದರ ನೇರಳ, ಸೋಮಶೇಖರ ನೇರಳ ಉಪಸ್ಥಿತರಿದ್ದರು.