

ವಿಜಯವಾಣಿ ಸುದ್ದಿಜಾಲ ಧಾರವಾಡ
ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ಅಂಗ ಸಂಸ್ಥೆ ವಿವೇಕ ಗ್ರಾಮೀಣ ಜೀವನಾಧಾರ ಕೇಂದ್ರವು ಯಶೋಧಾ ವೆಲ್ಫೇರ್ ಟ್ರಸ್ಟ್ ಸಹಯೋಗದಲ್ಲಿ ನಿರುದ್ಯೋಗಿ ಯುವಕರಿಗೆ ಮೊಬೈಲ್ ರಿಪೇರಿ ಮತ್ತು ಸವಿರ್ಸ್ ತರಬೇತಿಯನ್ನು ಮೇ 15ರಿಂದ ಆರಂಭಿಸಲಿದೆ.
ನಗರದ ವಿದ್ಯಾಗಿರಿ ಸತ್ತೂರ ಕಾಲನಿಯಲ್ಲಿನ ಯಶೋಧಾ ವೆಲ್ಫೇರ್ ಟ್ರಸ್ಟ್ ಕಚೇರಿಯಲ್ಲಿ ತರಬೇತಿ ನಡೆಯಲಿದ್ದು, ಮೇ 15ರಂದು ಬೆಳಗ್ಗೆ 11 ಗಂಟೆಗೆ ವೆಲ್ಫೇರ್ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ದತ್ತಾತ್ರೇಯ ಅಗ್ನಿಹೋತ್ರಿ ತರಬೇತಿಗೆ ಚಾಲನೆ ನೀಡುವರು. ಟ್ರಸ್ಟ್ ಕಾರ್ಯದಶಿರ್ ಪ್ರೊ. ವಿ.ಕೆ ಪರ್ವತಿ ಅತಿಥಿಯಾಗಿ ಆಗಮಿಸುವರು. ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ನ ಡಾ. ಡೆನ್ನಿಸ ಚವ್ಹಾಣ ಅಧ್ಯಕ್ಷತೆ ವಹಿಸುವರು.
ಮೊದಲ ತಂಡದಲ್ಲಿ 15 ಅಭ್ಯಥಿರ್ಗಳಿಗೆ ಮಾತ್ರ ತರಬೇತಿ ಪಡೆಯಲು ಅವಕಾಶವಿದ್ದು, 45 ದಿನಗಳ ಕಾಲ ಶಿಬಿರ ನಡೆಯಲಿದೆ ಎಂದು ವಿವೇಕ ಗ್ರಾಮೀಣ ಜೀವನಾಧಾರ ಕೇಂದ್ರದ ಮುಖ್ಯಸ್ಥ ಡಾ.ಗೋಪಾಲಕೃಷ್ಣ ಕಮಲಾಪುರ ತಿಳಿಸಿದ್ದಾರೆ.