ತರಬೇತಿ ಶಿಬಿರ 18ರಿಂದ

r
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ರ್ಯಾಪಿಡ್​ ಸಂಸ್ಥೆ ವತಿಯಿಂದ ಜೂ. 18ರಿಂದ 1 ತಿಂಗಳು ಕಾಲ ್ಯಾಶನ್​ ಡಿಸೈನಿಂಗ್​ ಉಚಿತ ತರಬೇತಿ ಶಿಬಿರ ಏರ್ಪಡಿಸಲಾಗಿದೆ. ಶಿಬಿರವು ನಿತ್ಯ ಮಧ್ಯಾಹ್ನ 2.30ರಿಂದ ಸಂಜೆ 5ರವರೆಗೆ ಇಲ್ಲಿನ ಮಾಳಮಡ್ಡಿ ಸ್ಟೇಶನ್​ ರಸ್ತೆಯಲ್ಲಿನ ರ್ಯಾಪಿಡ್​ ಸಂಸ್ಥೆಯಲ್ಲಿ ನಡೆಯಲಿದೆ. ಮುಂದಿನ ದಿನಗಳಲ್ಲಿ ಪ್ಯಾಬ್ರಿಕ್​ ಪೇಟಿಂಗ್​, ಕಂಪ್ಯೂಟರ್​ ಅಪ್ಲಿಕೇಶನ್ಸ್​, ಕರಕುಶಲ ವಸ್ತು ತಯಾರಿಕೆ ತರಬೇತಿಗಳು ನಡೆಯಲಿವೆ. ಆಸಕ್ತರು ಹೆಚ್ಚಿನ ಮಾಹಿತಿಗೆ ಸಂಸ್ಥೆಯ ಕಚೇರಿ ಸಂಪಕಿರ್ಸಬಹುದು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net