ತರಬೇತಿಯಿಂದ ಆತ್ಮವಿಶ್ವಾಸ ವೃದ್ಧಿ: ವಿಲ್ಫ್ರೆಡ್ ಡಿಸೋಜ ಹೇಳಿಕೆ

Upp_Training
Published on

ಉಪ್ಪಿನಂಗಡಿ: ಸ್ವ ಉದ್ಯೋಗ, ಅದಕ್ಕೆ ಸಂಬಂಧಿಸಿದ ತರಬೇತಿ ಮಹಿಳೆಯರಿಗೆ ಆತ್ಮವಿಶ್ವಾಸ ವೃದ್ಧಿಸುತ್ತದೆ ಎಂದು ಪಂಚಾಯತ್ ರಾಜ್ ಗ್ರಾಮೀಣ ಅಭಿವೃದ್ಧಿ ತರಬೇತುದಾರ ವಿಲ್ಫ್ರೆಡ್ ಡಿಸೋಜ ಹೇಳಿದರು.

ಬಜತ್ತೂರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತುಳಸಿ ಜ್ಞಾನ ವಿಕಾಸ ಕೇಂದ್ರ ವತಿಯಿಂದ ಮೂರು ತಿಂಗಳು ನಡೆಯುತ್ತಿದ್ದ ಟೈಲರಿಂಗ್ ತರಬೇತಿ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ವಳಾಲು ಹಾಲು ಉತ್ಪಾದಕರ ಸಹಕಾರ ಸಂಘ ಅಧ್ಯಕ್ಷ ವಸಂತ ಗೌಡ ಪಜಕ್ಕಳ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆ ವಿವಿಧ ಯೋಜನೆ ಜನರಿಗೆ ಉಪಯೋಗವಾಗುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.

ಪ್ರಗತಿ ಬಂಧು ಸ್ವಸಹಾಯ ಸಂಘ ಒಕ್ಕೂಟ ವಲಯಾಧ್ಯಕ್ಷ ನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಜ್ಞಾನ ವಿಕಾಸ ಪ್ರಾದೇಶಿಕ ನಿರ್ದೇಶಕರಾದ ವಿಠಲ್ ಪೂಜಾರಿ, ಉಮೇಶ್ ಓಡ್ರಪಾಲು ಮಾತನಾಡಿದರು. ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಶಶಿಧರ್, ತರಬೇತಿ ಶಿಕ್ಷಕಿ ಮಲ್ಲಿಕಾ, ಜ್ಞಾನ ವಿಕಾಸ ಜಿಲ್ಲಾ ಯೋಜನಾಧಿಕಾರಿ ಅಮೃತಾ, ವಳಾಲು ಒಕ್ಕೂಟ ಅಧ್ಯಕ್ಷ ಮಹೇಂದ್ರ ವರ್ಮ ಪಡ್ಪು ಉಪಸ್ಥಿತರಿದ್ದರು. ಯೋಜನೆ ಸುಜಾತ ಸ್ವಾಗತಿಸಿದರು. ಸೇವಾ ಪ್ರತಿನಿಧಿ ಬೇಬಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net