ಸ್ತ್ರೀಯರ ಆರ್ಥಿಕ ಸ್ವಾವಲಂಬನೆಗಾಗಿ ಪಣ

Untitled design(13)
ಸಂಡೂರು ತಾಲೂಕು ಧರ್ಮಾಪುರದಲ್ಲಿ ಬಿಕೆಜಿ ಫೌಂಡೇಶನ್‌ನಡಿ ಮಹಿಳೆಯರಿಗೆ ಹೊಲಿಗೆ ತರಬೇತಿ ಸಮಾರೋಪ ಕಾರ್ಯಕ್ರಮದಲ್ಲಿ ಬಿಕೆಜಿ ಹಿರಿಯ ನಿರ್ದೇಶಕ ಬಿ.ನಾಗನಗೌಡ, ಮ್ಯಾನೇಜರ್ ಬಿಕೆಜಿ ಮೈನ್ಸ್‌ನ ನರೇಶ್, ಜನರಲ್ ಮ್ಯಾನೇಜರ್ ರಾಜಶೇಖರ್ ಬೆಲ್ಲದ, ಸೋವೇನಹಳ್ಳಿ ಶಿವಮೂರ್ತಿ ಸ್ವಾಮಿ ಇತರರಿದ್ದರು.
Published on

ಸಂಡೂರು: ಬಿಕೆಜಿ ಸಂಸ್ಥೆಯಿಂದ ಮಹಿಳೆಯರ ಸಬಲೀಕರಣಕ್ಕಾಗಿ ಅನೇಕ ಕಾರ್ಯಕ್ರಮಗಳು ಅನುಷ್ಠಾನ ತರಲಾಗಿದೆ ಎಂದು ಬಿಕೆಜಿ ಹಿರಿಯ ನಿರ್ದೇಶಕ ಬಿ.ನಾಗನಗೌಡ ಹೇಳಿದರು.

ತಾಲೂಕಿನ ಧರ್ಮಾಪುರದಲ್ಲಿ ಮಹಿಳೆಯರಿಗೆ ಹಮ್ಮಿಕೊಂಡಿದ್ದ ಉಚಿತ ಹೊಲಿಗೆ ತರಬೇತಿಯ ಸಮಾರೋಪ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು.

ಮಹಿಳೆಯರು ಸದುಪಯೋಗ ಪಡೆಸಿಕೊಳ್ಳಲಿ

ಸ್ತ್ರೀಯರಿಗೆ ಆರು ತಿಂಗಳಿಂದ ತರಬೇತಿ ನೀಡಲಾಗುತ್ತಿದೆ. ಈಗಾಗಲೇ ಮೊದಲನೇ ಬ್ಯಾಚ್ ತರಬೇತಿ ಮುಗಿದಿದೆ. ಈಗ ಎರಡನೇ ಬ್ಯಾಚ್ ತರಬೇತಿ ಆರಂಭವಾಗಿದೆ. ಮಹಿಳೆಯರು ಸದುಪಯೋಗ ಪಡೆಸಿಕೊಳ್ಳಬೇಕು ಎಂದರು.

ತರಬೇತಿ ಪಡೆದಂತಹ ವಿದ್ಯಾರ್ಥಿ ವಾಣಿ ಮಾತನಾಡಿ, ತರಬೇತಿಯಿಂದ ಆರ್ಥಿಕವಾಗಿ ಜೀವನ ಸಾಗಿಸಲು ಸಹಾಯವಾಗಿದೆ ಎಂದರು.
ತರಬೇತಿಯ ಪೂರ್ಣಗೊಳಿಸಿದ ಮಹಿಳೆಯರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಬಿಕೆಜಿ ಮೈನ್ಸ್ ಮ್ಯಾನೇಜರ್ ನರೇಶ್, ಜನರಲ್ ಮ್ಯಾನೇಜರ್ ರಾಜಶೇಖರ್ ಬೆಲ್ಲದ, ಟ್ರಾನ್ಸ್‌ಪೋರ್ಟ್ ಕಾಂಟ್ರಾಕ್ಟರ್ ಧರ್ಮಪುರ ಎಚ್.ಆರ್.ರಮೇಶ್, ಪ್ರಮುಖರಾದ ಸೋವೇನಹಳ್ಳಿ ಶಿವಮೂರ್ತಿ ಸ್ವಾಮಿ, ಬಶೀರ್, ಕುಮಾರಸ್ವಾಮಿ, ಗೋಪಾಲ್, ಹೊಲಿಗೆ ತರಬೇತಿಯ ಶಿಕ್ಷಕರಾದ ಶಕುಂತಲಾ ಮತ್ತು ಇಂದ್ರಮ್ಮ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net