ಫೋಟೋಗ್ರಫಿ ವೃತ್ತಿಗೆ ತಾಳ್ಮೆ ಮುಖ್ಯ : ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಸಲಹೆ

New Project (18)
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಉದ್ಯಮ ನಡೆಸುವಾಗ ಎಲ್ಲ ರೀತಿಯಲ್ಲಿ ಸಮತೋಲನ ಕಾಯ್ದುಕೊಂಡು ಮುಂದುವರಿಯಬೇಕು. ಅದಕ್ಕೆ ಅಪಾರ ತಾಳ್ಮೆ ಮುಖ್ಯ. ಭಾವನೆ ಅರ್ಥ ಮಾಡಿಕೊಂಡು ಫೋಟೋ ತೆಗೆಯಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ, ರುಡ್‌ಸೆಟ್ ಸಂಸ್ಥೆಗಳ ಅಧ್ಯಕ್ಷ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

ಉಜಿರೆ ರುಡ್‌ಸೆಟ್ ಸಂಸ್ಥೆಯಲ್ಲಿ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ 31 ದಿನಗಳ ತರಬೇತಿ ಸಮಾರೋಪ ಸಮಾರಂಭದಲ್ಲಿ ಪ್ರಮಾಣಪತ್ರ ವಿತರಿಸಿ ಮಾತನಾಡಿದರು.

ರುಡ್‌ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ.ವಿಜಯ ಕುಮಾರ್, ತರಬೇತಿಯ ಸಂಪನ್ಮೂಲ ವ್ಯಕ್ತಿ ಸೂರ್ಯ ಪ್ರಕಾಶ ಬೆಂಗಳೂರು ಉಪಸ್ಥಿತರಿದ್ದರು. ಸಂಸ್ಥೆಯ ನಿರ್ದೇಶಕ ಅಜೇಯ ಸ್ವಾಗತಿಸಿದರು. ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಅಬ್ರಹಾಂ ಜೇಮ್ಸ್ ಕಾರ್ಯಕ್ರಮ ನಿರೂಪಿಸಿ, ಕೆ.ಕರುಣಾಕರ ಜೈನ್ ವಂದಿಸಿದರು. ಮಂಗಳಾ ಹಾಸನ, ಉದಯ ಗೋಕಾಕ, ಯೋಗೀಶ್ ಚಿಕ್ಕಮಗಳೂರು, ರೂಪ ಜಯನಗರ, ಮಧುಕರ್ ಮಂಡ್ಯ ತರಬೇತಿ ಅನುಭವ ಹಂಚಿಕೊಂಡರು.

ಅವಸರ ಮಾಡದೆ ಸಂದರ್ಭೋಚಿತ ಫೋಟೋ ತೆಗೆಯಬೇಕು. ಫೋಟೋಗಳು ವಿಭಿನ್ನವಾಗಿರಬೇಕು. ಸಹನೆ ಇಟ್ಟುಕೊಂಡು ವ್ಯವಹರಿಸಬೇಕು. ಮಾರುಕಟ್ಟೆಯ ವಿವಿಧ ವಿಭಾಗಗಳಲ್ಲಿ ಫೋಟೋಗ್ರಫಿ ಮಾಡಲು ಅವಕಾಶ ಇದೆ. ಇಂದು ಮದುವೆ ಪೂರ್ವ ಮತ್ತು ಮದುವೆ ನಂತರದ ಫೋಟೋ ತೆಗೆಸಿಕೊಳ್ಳುವ ಹವ್ಯಾಸ ಇದೆ. ಇದು ಫೋಟೋಗ್ರಾಫರ್‌ಗಳಿಗೆ ಹೊಸ ಅವಕಾಶ. ಈ ವಲಯಕ್ಕೆ ಮಿತಿಯಿಲ್ಲ. ಅಪಾರ ಅವಕಾಶ ಬಳಸಿ ಮುಂದುವರಿಯಿರಿ. ಡಾ.ಡಿ.ವೀರೇಂದ್ರ ಹೆಗ್ಗಡೆ ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net