ಕೌಶಲ ಇದ್ದರೆ ವೃತ್ತಿ ನಿರ್ವಹಣೆ ಸುಲಭ

2
Published on

ಆಲೂರು: ಕೌಶಲ ಇದ್ದರೆ ವೃತ್ತಿ ನಿರ್ವಹಣೆ ಸುಲಭ ಎಂದು ಶಾಸಕ ಸಿಮೆಂಟ್ ಮಂಜುನಾಥ ತಿಳಿಸಿದರು. ಪಟ್ಟಣದ ಕೊನೆಪೇಟೆಯಲ್ಲಿರುವ ಪಿ.ಎಂ.ವಿಶ್ವಕರ್ಮ ಸ್ಕಿಲ್ ಟ್ರೇನಿಂಗ್ ಸೆಂಟರ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಟೈಲರಿಂಗ್ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.ಕೇಂದ್ರ ಸರ್ಕಾರದ ಪ್ರಮುಖ ಯೋಜನೆಯಾದ ಪಿ.ಎಂ.ವಿಶ್ವಕರ್ಮ ಯೋಜನೆಯನ್ನು ನಗರ, ಗ್ರಾಮೀಣ ಪ್ರದೇಶದ ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ಕರಕುಶಲ ತರಬೇತಿಗಾಗಿಯೇ ರೂಪಿಸಲಾಗಿದೆ.
ಗ್ರಾಮೀಣ ಭಾಗದ ಮಹಿಳೆಯರು ಆರ್ಥಿಕವಾಗಿ ಸಬಲೀಕರಣರಾಗಬೇಕಾದರೆ ತರಬೇತಿ ಅಗತ್ಯ ಎಂದರು. ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಸದುಪಯೋಗ ಮಾಡಿಕೊಂಡು ಸ್ವಾವಲಂಬಿ ಜೀವನ ಸಾಗಿಸಬೇಕು, ಮಹಿಳೆಯರು ಪುರುಷರಂತೆಯೇ ಎಲ್ಲಾ ಕ್ಷೇತ್ರವನ್ನೂ ಪ್ರತಿನಿಧಿಸಬೇಕು ಎಂದರು.
ಉದ್ಯಮಿ ಶಾಂತಕುಮಾರ್ ಮಾತನಾಡಿ, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪಿ.ಎಂ. ವಿಶ್ವ ಕರ್ಮ ಯೋಜನೆಯಡಿ ಆಟೋರಿಕ್ಷಾ ಚಾಲನೆ, ಕಬ್ಬಿಣ ಕಟ್ಟುವುದು, ಕಮ್ಮಾರ, ಚಮ್ಮಾರ, ಕುಂಬಾರ, ಹೂಗಾರ, ಕಟ್ಟಡ ನಿರ್ಮಾಣ, ಟೈಲರಿಂಗ್ ಸೇರಿದಂತೆ ಸುಮಾರು 18 ವೃತ್ತಿಗೆ ಕೌಶಲ ತರಬೇತಿ ನೀಡಲಾಗುವುದು ಎಂದರು. ಹಾಸನ ಜಿಲ್ಲೆಯಲ್ಲಿ 2,450 ಜನರು ತರಬೇತಿ ಮತ್ತು ಸಾಲ ಸೌಲಭ್ಯ ಪಡೆಯಲು ಆಯ್ಕೆಯಾಗಿದ್ದರು, ನಮ್ಮ ಸಂಸ್ಥೆಯಲ್ಲಿ 400 ಜನರಿಗೆ ತರಬೇತಿ ನೀಡಲಾಯಿತು ಎಂದರು.ಆಲೂರು ಕಟ್ಟಾಯ ಮಂಡಲದ ಬಿಜೆಪಿ ತಾಲೂಕು ಅಧ್ಯಕ್ಷ ಹುಲ್ಲಹಳ್ಳಿ ನಾಗರಾಜು, ಪಿ.ಎಂ. ವಿಶ್ವಕರ್ಮ ತರಬೇತಿ ಕೇಂದ್ರ ಸದಸ್ಯರು ಹಾಗೂ ಫಲಾನುಭವಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net