ಪೌಷ್ಠಿಕ ಆಹಾರ ತಯಾರಕರಿಗೆ ಪುನಶ್ಚೇತನ ತರಬೇತಿ

training
Published on

ಮಡಿಕೇರಿ:

ಸೋಮವಾರಪೇಟೆ ತಾಲೂಕು ಶಿಶು ಅಭಿವೃದ್ಧಿ ಯೋಜನಾ ಇಲಾಖೆ, ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಅಂಗನವಾಡಿ ಫಲಾನುಭವಿಗಳಿಗೆ ಪೂರೈಕೆಯಾಗುವ ಪೂರಕ ಪೌಷ್ಠಿಕ ಆಹಾರ ಪದಾರ್ಥಗಳನ್ನು ತಯಾರಿಸುವ ಎಂ.ಎಸ್.ಪಿ.ಸಿ. ಸಂಸ್ಥೆಯ ಸದಸ್ಯರುಗಳಿಗೆ ಈಚೆಗೆ ಪುನಶ್ಚೇತನ ತರಬೇತಿ ಕಾರ್ಯಾಗಾರ ಏರ್ಪಡಿಸಲಾಗಿತ್ತು. ಕೂಡಿಗೆಯಲ್ಲಿರುವ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಭಾಂಗಣದಲ್ಲಿ ನಡೆದ ತರಬೇತಿ ಕಾರ್ಯಕ್ರಮಕ್ಕೆ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀದೇವಿ ಬಿ. ಮುಧೋಳ ಚಾಲನೆ ನೀಡಿದರು.

ಜಿಲ್ಲೆಯ ಆಹಾರ ಸುರಕ್ಷತೆ ವಿಭಾಗದ ನಿಯೋಜಿತ ಅಧಿಕಾರಿ ಎ.ಐ. ಮಂಜುನಾಥ ಎಂ.ಎಸ್. ಪಿ.ಸಿ. ಮತ್ತು ಎ.ಡಬ್ಲ್ಯೂ ಸಿ. ಯಲ್ಲಿ ಆಹಾರ ಗುಣಮಟ್ಟ ಕಾಯ್ದೆ ಅಡಿ ಪೂರಕ ಪೌಷ್ಠಿಕ ಆಹಾರ ಪದಾರ್ಥಗಳ ನಿರ್ವಹಣೆಯ ಕುರಿತು ಸವಿಸ್ತಾರ ಮಾಹಿತಿ ನೀಡಿದರು.

ಕುಶಾಲನಗರ ಆರೋಗ್ಯ ಇಲಾಖೆಯ ಮಕ್ಕಳ ತಜ್ಞ ಡಾ. ಶಿವಕುಮಾರ್, ಬಾಣಂತಿಯರು,ಮತ್ತು ಮಕ್ಕಳ ಪೌಷ್ಟಿಕ ಆಹಾರದ ಬಗ್ಗೆ ತರಬೇತಿ ನೀಡಿದರು.

ಮೈಸೂರಿನ ವಿಭಾಗೀಯ ಪ್ರತಾಗಾರ ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿ, ಹಿರಿಯ ಸಹಾಯಕ ನಿರ್ದೇಶಕ ಹೆಚ್.ಎಲ್ ಮಂಜುನಾಥ ಕಚೇರಿ ಪತ್ರಗಳ ರೆಕಾರ್ಡ್ ರೂಮಿನ ನಿರ್ವಹಣೆ ಮಾಹಿತಿ ಬಗ್ಗೆ ತರಬೇತಿ ನೀಡಿದರು.

ಮೇಲ್ವಿಚಾರಕಿ ಸಾವಿತ್ರಮ್ಮ, ಇಲಾಖೆಯ ಸಿಬ್ಬಂದಿ ವರ್ಗದವರು, ಅಂಗನವಾಡಿ ಕಾರ್ಯಕರ್ತೆಯರು, ಎಂ.ಎಸ್.ಪಿ ಸಿ. ಸಂಸ್ಥೆಯ ಸಿಬ್ಬಂದಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net