ಜೀವನ ವಿಜ್ಞಾನ ಮಾನವನ ಬದುಕಿಗೆ ಬೆಳಕು-ಎಂ.ನಾಸಿರುದ್ದೀನ್

LIFE SCIENCE Meeting photo-1-08
Published on

ಚಿತ್ರದುರ್ಗ: ಜೀವನ ವಿಜ್ಞಾನ ಮಾನವ ಬದುಕಿಗೆ ಬೆಳಕಾಗಿದೆ ಎಂದು ಡಯಟ್ ಪ್ರಾಚಾರ‌್ಯ ಎಂ.ನಾಸಿರುದ್ದೀನ್ ಹೇಳಿದರು. ಜಿಲ್ಲೆ ಯ ಬಿಇಒ,ಬಿಆರ್‌ಸಿ,ಇಸಿಒ,ಬಿಆರ್‌ಪಿ,ಸಿಆರ್‌ಪಿಗಳಿಗೆ ಜೀವನ ವಿಜ್ಞಾನ ಮಾಹಿತಿ ಕುರಿತು ನಗರದ ಡಯಟ್‌ನಲ್ಲಿ ಸೋಮವಾರ ಆ ಯೋಜಿಸಿದ್ದ ಆನ್‌ಲೈನ್ ಸಭೆಯಲ್ಲಿ ಮಾತನಾಡಿ,ಜೀವನ ವಿಜ್ಞಾನವು ಮಾನವನ ಬದುಕನ್ನು ಹಸನು ಮಾಡಿಕೊಳ್ಳಲು ಭದ್ರ ಬುನಾದಿ ಒದಗಿಸುತ್ತದೆ ಎಂದರು.

ಕರ್ನಾಟಕ ಜೀವನ ವಿಜ್ಞಾನ ಅಕಾಡೆಮಿ ಸಹಯೋಗದಲ್ಲಿ ಡಿಎಸ್‌ಇಆರ್‌ಟಿ ಜೀವನ ವಿಜ್ಞಾನ ಆನ್‌ಲೈನ್ ಮಾದರಿ ಸಿದ್ಧಪಡಿಸಿದೆ. ಸರ್ಕಾರಿ,ಅನುದಾನಿತ ಹಾಗೂ ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು,ವಿದ್ಯಾರ್ಥಿಗಳು ಮತ್ತು ಪಾಲಕರು ಈ ತರಬೇತಿ ಪಡೆಯಬೇಕೆಂದು ತಿಳಿಸಿದರು.

ಹಿರಿಯ ಉಪನ್ಯಾಸಕ ಸಯ್ಯದ್‌ಮೋಸಿನ್ ಮಾತನಾಡಿ,ಮಗು 3ನೇ ತರಗತಿ ಪೂರ್ಣಗೊಳಿಸುವ ವೇಳೆಗೆ ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಜ್ಞಾನದ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವಂತಾಗಬೇಕೆಂದರು. ಹಿರಿಯ ಉಪನ್ಯಾಸಕ ಎಸ್.ಸಿ.ಪ್ರಸಾದ್,ಉಪನ್ಯಾಸಕರಾದ ಯು. ಸಿದ್ದೇಶಿ,ಎಸ್.ಬಸವರಾಜು,ವಿ.ಕನಕಮ್ಮ,ಎನ್.ಮಂಜುನಾಥ್,ತಾಂತ್ರಿಕ ಸಹಾಯಕರಾದ ಕೆ.ಆರ್.ಲೋಕೇಶ್,ಆರ್.ಲಿಂಗರಾಜು ಇದ್ದರು.

----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net