

ಮಡಿಕೇರಿ:
ಸಣ್ಣ ವಯಸ್ಸಿನಲ್ಲಿಯೇ ಹೆಚ್ಚು ಹೆಚ್ಚು ಜವಾಬ್ದಾರಿಯನ್ನು ನಿಭಾಯಿಸುವುದರಿಂದ ಭವಿ?್ಯದಲ್ಲಿ ಸಾಧನೆ ಮಾಡಲು ಮುನ್ನುಡಿಯಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಹೇಳಿದರು.
ಹೊಸದಾಗಿ ಆಯ್ಕೆಗೊಂಡ ಗ್ರಾಮ ಲೆಕ್ಕಾಧಿಕಾರಿಗಳಿಗೆ ನಗರದ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಗುರುವಾರ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಾಕೃತಿಕ ವಿಕೋಪ ಸೇರಿದಂತೆ ವಿವಿಧ ರೀತಿಯ ಸವಾಲುಗಳು ಹಾಗೂ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಎಲ್ಲರೂ ಹೆಚ್ಚು ವಿಚಾರಗಳನ್ನು ತಿಳಿದುಕೊಳ್ಳುವಂತಾಗಬೇಕು. ಅಧಿಕಾರಿಗಳು ಯಾವ ರೀತಿಯಾಗಿ ಯಾವ ಸೆಕ್ಷನ್ ಅಡಿಯಲ್ಲಿ ಯಾರು ಜಾಗ ಮಂಜೂರು ಮಾಡಿದ್ದಾರೆ ಹಾಗೂ ಯಾವ ಸೆಕ್ಷನ್ ಅಡಿಯಲ್ಲಿ ಮಂಜೂರು ಮಾಡಬಹುದು ಎಂದು ತಿಳಿಸಲಾಗುವುದು. ಕೆಲವೊಂದು ವಿಚಾರಗಳ ಬಗ್ಗೆ ತಿಳಿಯಲು ಖುದ್ದಾಗಿ ಸ್ಥಳ ಪರಿಶೀಲನೆ ಮಾಡಿ ಹೇಳಿಕೊಡಲಾಗುವುದು. ಸೆಕ್ಷನ್‌ಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ತಿಳಿದುಕೊಳ್ಳಲು ಪುಸ್ತಕ ಅಧ್ಯಯನ ಮಾಡಬೇಕು. ದಿನ ನಿತ್ಯ ೨ ರಿಂದ ೩ ಗಂಟೆ ಇದಕ್ಕೆ ಸಮಯ ಮೀಸಲಿಡಬೇಕು. ವಾಟ್ಸಪ್ ಗ್ರೂಪ್ ರಚಿಸಿಕೊಂಡು ಸಂದೇಶ ಹಾಗೂ ಯಾವುದಾದರು ವಿ?ಯಗಳ ಬಗ್ಗೆ ಸ್ಪ?್ಟ ಮಾಹಿತಿ ಇಲ್ಲದೆ ಇದ್ದರೆ ಪರಸ್ಪರ ಸಮಾಲೋಚನೆ ನಡೆಸಿ ಬಗೆಹರಿಸಿಕೊಳ್ಳಬೇಕು ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ ಮಾತನಾಡಿ ನಿರಂತರವಾಗಿ ಓದುವ ಮೂಲಕ ಜ್ಞಾನ ವೃದ್ದಿಸಿಕೊಳ್ಳಬೇಕು, ಗ್ರಾಮಾಡಳಿತ ಗ್ರಾಮ ಲೆಕ್ಕಾಧಿಕಾರಿಯ ಜವಾಬ್ದಾರಿ, ಕರ್ತವ್ಯಗಳ ಬಗ್ಗೆ ತರಬೇತಿಯಲ್ಲಿ ತಿಳಿಸಲಾಗುವುದು. ಆಹಾರ, ಚುನಾವಣೆ, ಭೂ ಅಭಿವೃದ್ಧಿ, ಸಾರ್ವಜನಿಕ ಸ್ಥಳಗಳಿಗೆ ಭೂಮಿ ಹಂಚಿಕೆ ಇನ್ನೂ ಹಲವಾರು ವಿ?ಯಗಳ ಬಗ್ಗೆ ಮಾಹಿತಿ ನೀಡಲಾಗುವುದು. ಆದ್ದರಿಂದ ಹೆಚ್ಚಿನ ಗಮನ ಕೇಂದ್ರೀಕರಿಸಿ ಮಾಹಿತಿ ತಿಳಿದುಕೊಳ್ಳುವಂತೆ ಹೇಳಿದರು.
ನಿವೃತ್ತ ತಹಶೀಲ್ದಾರ ಬಿ.ಎಸ್. ಹಿರಿಯಣ್ಣ ಮಾತನಾಡಿ ಅಭ್ಯರ್ಥಿಗಳಿಗೆ ವಾರದಲ್ಲಿ ಒಂದು ಬಾರಿಯಾದರೂ ತಾಲೂಕು ಕಚೇರಿಗಳಲ್ಲಿ ಪ್ರಾಯೋಗಿಕವಾಗಿ ತರಬೇತಿ ನೀಡಲು ಅನುವು ಮಾಡಿ ಕೊಡುವಂತೆ ಕೋರಿದರು. ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಶಿವರಾಮಯ್ಯ ಮಾತನಾಡಿದರು.