ರೈಲು ಹಳಿಗೆ ಸಿಲುಕಿ ಆತ್ಮಹತ್ಯೆ

Death 5 May 20
Published on

ಬೆಳಗಾವಿ: ತಾಲೂಕಿನ ಸುಳೇಬಾವಿ ಗ್ರಾಮದ ಬಳಿ ಸೋಮವಾರ 50 ವರ್ಷದ ಅಪರಿಚಿತ ವ್ಯಕ್ತಿಯೊಬ್ಬ ಚಲಿಸುವ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸುಳೇಬಾವಿ ಮತ್ತು ಸುಲದಾಳ ರೈಲು ನಿಲ್ದಾಣಗಳ ಮಧ್ಯೆ ರೈಲು ಹಳಿಗಳ ಮೇಲೆ ಮಲಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಗೋಧಿ ಮೈಬಣ್ಣ, ಫುಲ್ ಶರ್ಟ್, ನೀಲಿ ಜಾಕೆಟ್ ಧರಿಸಿದ್ದು, ನೀಲಿ ಕೈ ಚೀಲ ಮತ್ತು ಕೆಂಪು ಛತ್ರಿ ಹೊಂದಿದ್ದಾನೆ. ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ ಎಂದು ಪ್ರಕರಣ ದಾಖಲಿಸಿಕೊಂಡ ಬೆಳಗಾವಿ ನಗರದ ರೈಲ್ವೆ ಠಾಣೆ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net