ಕುಷ್ಟಗಿ: ಗದಗ-ವಾಡಿ ರೈಲು ಸಂಚಾರಕ್ಕೆ ಮೇ 15ರಂದು ಚಾಲನೆ ನೀಡಲಾಗುತ್ತಿದೆ. ತಾಲೂಕು ಸೇರಿದಂತೆ ಅಕ್ಕ ಪಕ್ಕದ ತಾಲೂಕಿನ ಜನ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಶಾಸಕ ದೊಡ್ಡನಗೌಡ ಪಾಟೀಲ್ ಹೇಳಿದರು.
ಶಾಸಕರ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದಿನ ಕಾರ್ಯಕ್ರಮಕ್ಕೆ ರೈಲು ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಆಗಮಿಸುತ್ತಿದ್ದಾರೆ. ಬೆಳಗ್ಗೆ 10ಕ್ಕೆ ವೇದಿಕೆ ಕಾರ್ಯಕ್ರಮ, ನಂತರ ರೈಲು ಸಂಚಾರಕ್ಕೆ ಚಾಲನೆ ನೀಡಲಾಗುವುದು. ತಾಲೂಕಿನ ಜನರ ಬಹುದಿನದ ಕನಸು ನನಸಾಗಲಿದೆ. ಕುಷ್ಟಗಿಯಿಂದ ಹುಬ್ಬಳ್ಳಿಗೆ ಎರಡು ಬಾರಿ ರೈಲು ಸಂಚರಿಸಲಿದೆ ಎಂದರು.
ಪ್ರಮುಖರಾದ ಡಾ. ಕೆ. ಬಸವರಾಜ, ವೀರೇಶ ಬಂಗಾರಶೆಟ್ಟರ್, ಅಶೋಕ ಬಳೂಟಗಿ, ಪಾಂಡುರಂಗ ಆಶ್ರೀತ್, ಕೆ. ಮಹೇಶ, ಕಲ್ಲೇಶ್ ತಾಳದ, ಉಮೇಶ್ ಯಾದವ್, ಪರಶುರಾಮ ನಾಗರಾಳ, ಶಶಿಧರ ಕವಲಿ ಇತರರು ಇದ್ದರು.