

ಹುಬ್ಬಳ್ಳಿ : ದೀಪಾವಳಿ ಮತ್ತು ಛತ್ ಹಬ್ಬಗಳ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆ ನಿಯಂತ್ರಣಕ್ಕಾಗಿ ಮುಜಫರ್ಪುರ ಮತ್ತು ಎಸ್ಎಸ್ಎಸ್ ಹುಬ್ಬಳ್ಳಿ ಮಧ್ಯೆ ವಾರದ ವಿಶೇಷ ಎಕ್ಸ್ಪ್ರೆಸ್ ರೈಲು ಸಂಚಾರ (6 ಟ್ರಿಪ್) ಪ್ರಾರಂಭಿಸಲಾಗಿದೆ.
ಮುಜಫರ್ಪುರನಿಂದ ಅ. 10 ರಿಂದ ನ. 14ರವರೆಗೆ ಪ್ರತಿ ಶುಕ್ರವಾರ ಮಧ್ಯಾಹ್ನ 12.45ಕ್ಕೆ ಹೊರಡುವ ರೈಲು, ಸೋಮವಾರ ಮಧ್ಯಾಹ್ನ 12.20ಕ್ಕೆ ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣ ತಲುಪಲಿದೆ.
ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣದಿಂದ ಅ. 14 ರಿಂದ ನ. 18ರವರೆಗೆ ಪ್ರತಿ ಮಂಗಳವಾರ ಬೆಳಗ್ಗೆ 9 ಗಂಟೆಗೆ ಹೊರಡುವ ರೈಲು, ಶುಕ್ರವಾರ ಬೆಳಗಿನಜಾವ 5 ಗಂಟೆಗೆ ಮುಜಫರಪುರ ನಿಲ್ದಾಣ ತಲುಪಲಿದೆ.
ಈ ರೈಲು ಮಾರ್ಗ ಮಧ್ಯದ ಮೋತಿಪುರ, ಚಕಿಯಾ, ಬಾಪುಧಾಮ್ ಮೋತಿಹಾರಿ, ಸಗೌಲಿ ಜಂಕ್ಷನ್, ಬೆತ್ತಿಯಾ, ಯಲಹಂಕ ಜಂಕ್ಷನ್, ತುಮಕೂರು, ದಾವಣಗೆರೆ, ರಾಣೆಬೆನ್ನೂರು, ಎಸ್ಎಂಎಂ ಹಾವೇರಿ ಹಾಗೂ ಇನ್ನಿತರ ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ.