ಹಳ್ಳಿಗುಡಿಯಲ್ಲಿ ರೈಲು ನಿಲುಗಡೆ

train
Published on

ಹುಬ್ಬಳ್ಳಿ : ನೈಋತ್ಯ ರೈಲ್ವೆಯು ಎಸ್​ಎಸ್​ಎಸ್​ ಹುಬ್ಬಳ್ಳಿ  -ಸಿಂಧನೂರು ನಿಲ್ದಾಣಗಳ ನಡುವೆ ನಿತ್ಯ ಸಂಚರಿಸುವ ಪ್ಯಾಸೆಂಜರ್​ ರೈಲುಗಳ ನಿಲುಗಡೆಯನ್ನು ಹಳ್ಳಿಗುಡಿ ನಿಲ್ದಾಣದಲ್ಲಿ ಪ್ರಾಯೋಗಿಕವಾಗಿ ಮೂರು ತಿಂಗಳ ಅವಧಿಗೆ ಮುಂದುವರಿಸಲು ತೀರ್ಮಾನಿಸಿದೆ.

ಈ ತಾತ್ಕಾಲಿಕ ನಿಲುಗಡೆ ಮಾ. 1 ರಿಂದ ಮೇ 31 ರವರೆಗೆ ಜಾರಿಯಲ್ಲಿರುತ್ತದೆ. ಎಸ್​ಎಸ್​ಎಸ್​ ಹುಬ್ಬಳ್ಳಿ-ಸಿಂಧನೂರು ಡೈಲಿ ಪ್ಯಾಸೆಂಜರ್​ ರೈಲು, ಹಳ್ಳಿಗುಡಿ ನಿಲ್ದಾಣಕ್ಕೆ ಬೆಳಗ್ಗೆ 10.29ಕ್ಕೆ ಆಗಮಿಸಿ, 10.30 ಕ್ಕೆ ನಿರ್ಗಮಿಸಲಿದೆ.

ಸಿಂಧನೂರು- ಎಸ್​ಎಸ್​ಎಸ್​ ಹುಬ್ಬಳ್ಳಿ ಡೈಲಿ ಪ್ಯಾಸೆಂಜರ್​ ರೈಲು, ಹಳ್ಳಿಗುಡಿ ನಿಲ್ದಾಣಕ್ಕೆ ಸಂಜೆ 5.03ಕ್ಕೆ ಆಗಮಿಸಿ, 5.04ಕ್ಕೆ ನಿರ್ಗಮಿಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net