ಕ್ಯಾಸಲ್​ರಾಕ್-ಕರಂಜೋಲ್ ಮಾರ್ಗದಲ್ಲಿ ರೈಲು ಸಂಚಾರ ಪುನಾರಂಭ

restoration
Published on

ಹುಬ್ಬಳ್ಳಿ: ಧಾರಾಕಾರ ಮಳೆಯಿಂದ ಗುಡ್ಡ ಕುಸಿದು ಹಾನಿಗೊಳಗಾದ ಕ್ಯಾಸಲ್​ರಾಕ್-ಕರಂಜೋಲ್ ನಿಲ್ದಾಣಗಳ ನಡುವಿನ ರೈಲು ಮಾರ್ಗವನ್ನು ದುರಸ್ತಿ ಪಡಿಸಲಾಗಿದೆ. ಭಾನುವಾರ ಮಧ್ಯಾಹ್ನ ಈ ಮಾರ್ಗದಲ್ಲಿ ರೈಲು ಸಂಚಾರ ಪುನಾರಂಭಗೊಂಡಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

ಮಂಗಳವಾರ ರಾತ್ರಿ ಗುಡ್ಡ ಕುಸಿದ ಪರಿಣಾಮ ಅಪಾರ ಪ್ರಮಾಣದ ಕಲ್ಲು-ಮಣ್ಣುಗಳಿಂದ ರೈಲು ಮಾರ್ಗ ಮುಚ್ಚಿ ಹೋಗಿದ್ದವು. ಅಂದಿನಿಂದ ಈ ಮಾರ್ಗದಲ್ಲಿ ಎಲ್ಲ ರೈಲುಗಳ ಸಂಚಾರ ರದ್ದುಪಡಿಸಲಾಗಿತ್ತು.

ಭಾನುವಾರ ಮಧ್ಯಾಹ್ನ 12 ಗಂಟೆಗೆ ರೈಲು ಮಾರ್ಗವನ್ನು ಸಂಚಾರಕ್ಕೆ ಮುಕ್ತಗೊಳಿಸಲಾಯಿತು. ಬಳಿಕ 3.30 ಗಂಟೆಗೆ ಸರಕು ಸಾಗಣೆ ರೈಲು ಈ ಮಾರ್ಗದಲ್ಲಿ ಸಂಚರಿಸಿದೆ. ಮುಂಜಾಗೃತಾ ಕ್ರಮವಾಗಿ ವೇಗದ ಮಿತಿಯನ್ನು (ಪ್ರತಿ ಗಂಟೆಗೆ 10 ಕಿ.ಮೀ.) ನಿಗದಿಪಡಿಸಲಾಗಿದೆ ಎಂದು ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net