ಪಂಢರಪುರಕ್ಕೆ ರೈಲು ಸಂಚಾರ ವಿಸ್ತರಣೆ

TRAIN
Published on

ಹುಬ್ಬಳ್ಳಿ : ಪಂಢರಪುರದಲ್ಲಿ ನಡೆಯುವ ಆಷಾಢ ಏಕಾದಶಿ ಜಾತ್ರೆಯಲ್ಲಿ ಪಾಲ್ಗೊಳ್ಳುವ ಭಕ್ತರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆಯು ಎರಡು ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ಪಂಢರಪುರದವರೆಗೆ ವಿಸ್ತರಿಸಲು ನಿರ್ಧರಿಸಿದೆ.

ಕ್ಯಾಸಲ್​ರಾಕ್-ಮೀರಜ್ ಎಕ್ಸ್​ಪ್ರೆಸ್ ರೈಲನ್ನು ತಾತ್ಕಾಲಿಕವಾಗಿ ಪಂಢರಪುರದವರೆಗೆ ವಿಸ್ತರಿಸಲಾಗಿದೆ. ಈ ರೈಲು ಜುಲೈ 4ರಿಂದ 9 ರವರೆಗೆ ಕ್ಯಾಸಲ್​ರಾಕ್ ಮತ್ತು ಪಂಢರಪುರ ನಡುವೆ ಸಂಚರಿಸಲಿದೆ.

ಕ್ಯಾಸಲ್​ರಾಕ್​ನಿಂದ ವಿಜಯನಗರದವರೆಗಿನ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ವಿಸ್ತರಿತ ಮಾರ್ಗದಲ್ಲಿ ರೈಲು ಮೀರಜ್​ಗೆ ಮಧ್ಯರಾತ್ರಿ 12.20ಕ್ಕೆ ಆಗಮಿಸಿ, 12.50ಕ್ಕೆ ಹೊರಟು, ಬೆಳಗಿನ ಜಾವ 3 ಗಂಟೆಗೆ ಪಂಢರಪುರ ತಲುಪಲಿದೆ.

ಮೀರಜ್- ಎಸ್​ಎಸ್​ಎಸ್ ಹುಬ್ಬಳ್ಳಿ ಎಕ್ಸ್​ಪ್ರೆಸ್ ರೈಲು ಪಂಢರಪುರದಿಂದ ಹೊರಡಲಿದೆ. ಈ ರೈಲು ಜುಲೈ 5ರಿಂದ 10 ರವರೆಗೆ ಪಂಢರಪುರದಿಂದ ಎಸ್​ಎಸ್​ಎಸ್ ಹುಬ್ಬಳ್ಳಿ ನಡುವೆ ಸಂಚರಿಸಲಿದೆ.

ಪಂಢರಪುರದಿಂದ ಬೆಳಗಿನ ಜಾವ 4 ಗಂಟೆಗೆ ಹೊರಟು, ಬೆಳಗ್ಗೆ 6.45ಕ್ಕೆ ಮೀರಜ್ ತಲುಪಿ, 7.15ಕ್ಕೆ ಅಲ್ಲಿಂದ ಹೊರಡಲಿದೆ. ವಿಜಯನಗರದಿಂದ ಹುಬ್ಬಳ್ಳಿಯವರೆಗಿನ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net