ರೈಲು ಸಂಚಾರ ವಿಸ್ತರಣೆ

TRAIN NEW
Published on

ಹುಬ್ಬಳ್ಳಿ : ಪ್ರಯಾಣಿಕರ ದಟ್ಟಣೆ ಹಿನ್ನೆಲೆಯಲ್ಲಿ ವಿವಿಧ ರೈಲುಗಳ ಸಂಚಾರವನ್ನು ವಿಸ್ತರಿಸಲಾಗಿದೆ.

ಪ್ರತಿ ಸೋಮವಾರ ಹುಬ್ಬಳ್ಳಿಯಿಂದ ಪ್ರಾರಂಭಗೊಳ್ಳುವ ಎಸ್​ಎಸ್​ಎಸ್ ಹುಬ್ಬಳ್ಳಿ - ತಂಜಾವೂರು ಸಾಪ್ತಾಹಿಕ ಎಕ್ಸ್​ಪ್ರೆಸ್ ರೈಲು ಜು. 31ರವರೆಗೆ ಸಂಚಾರ ನಡೆಸಲು ನಿರ್ಧರಿಸಲಾಗಿತ್ತು. ಇದೀಗ ಈ ರೈಲಿನ ಸಂಚಾರವನ್ನು ಆ. 7 ರಿಂದ ಸೆ. 25ರವರೆಗೆ ವಿಸ್ತರಿಸಲಾಗಿದೆ.

ಪ್ರತಿ ಮಂಗಳವಾರ ತಂಜಾವೂರಿನಿಂದ ಸಂಚರಿಸುತ್ತಿದ್ದ ತಂಜಾವೂರು - ಎಸ್​ಎಸ್​ಎಸ್ ಹುಬ್ಬಳ್ಳಿ ಸಾಪ್ತಾಹಿಕ ಎಕ್ಸ್​ಪ್ರೆಸ್ ರೈಲು ಈ ಮೊದಲು ಆ. 1ರವರೆಗೆ ಸಂಚರಿಸಲು ಸೂಚಿಸಲಾಗಿತ್ತು. ಇದೀಗ ಈ ರೈಲಿನ ಸಂಚಾರವನ್ನು ಆ. 8 ರಿಂದ ಸೆ. 26ರವರೆಗೆ ವಿಸ್ತರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net