ರೈಲು ಸಂಚಾರ ವಿಸ್ತರಣೆ

NEW RAIL NEW
Published on

ಹುಬ್ಬಳ್ಳಿ : ಪ್ರಯಾಣಿಕರ ಬಹುದಿನಗಳ ಬೇಡಿಕೆಯಾದ ಮೈಸೂರು - ಸೊಲ್ಲಾಪುರ- ಮೈಸೂರು ಗೋಲಗುಂಬಜ್ ಎಕ್ಸ್​ಪ್ರೆಸ್ ರೈಲುಗಳನ್ನು ಪಂಢರಪುರ ನಿಲ್ದಾಣದವರೆಗೆ ವಿಸ್ತರಿಸುವ ಪ್ರಸ್ತಾವನೆಗೆ ರೈಲ್ವೆ ಸಚಿವಾಲಯ ಅನುಮೋದನೆ ನೀಡಿದೆ.

ಸೆ. 4 ರಿಂದ ಮೈಸೂರು- ಪಢರಪುರ ಗೋಲಗುಂಬಜ್ ಎಕ್ಸ್​ಪ್ರೆಸ್ ರೈಲು ಮಧ್ಯಾಹ್ನ 3.45ಕ್ಕೆ ಹೊರಟು, ಮಾರನೇ ದಿನ ಮಧ್ಯಾಹ್ನ 12.25ಕ್ಕೆ ಪಂಢರಪುರ ನಿಲ್ದಾಣ ತಲುಪಲಿದೆ.

ಸೆ. 5 ರಿಂದ ಪಂಢರಪುರ -ಮೈಸೂರು ಗೋಲಗುಂಬಜ್ ಎಕ್ಸ್​ಪ್ರೆಸ್ ರೈಲು ಮಧ್ಯಾಹ್ನ 1 ಗಂಟೆಗೆ ಹೊರಟು, ಮಾರನೇ ದಿನ ಬೆಳಗ್ಗೆ 10.45ಕ್ಕೆ ಮೈಸೂರು ನಿಲ್ದಾಣ ತಲುಪಲಿದೆ.

ಈ ರೈಲು ಕುರ್ದುವಾಡಿ, ಸೊಲ್ಲಾಪುರ, ಇಂಡಿ ರೋಡ್, ವಿಜಯಪುರ, ಬಸವನ ಬಾಗೇವಾಡಿ, ಆಲಮಟ್ಟಿ, ಬಾಗಲಕೋಟೆ, ಗುಳೇದಗುಡ್ಡ ರೋಡ್, ಬದಾಮಿ, ಹೊಳೆ ಆಲೂರು, ಗದಗ, ಅಣ್ಣಿಗೇರಿ ಮೂಲಕ ಸಂಚರಿಸಲಿದೆ. ಎಸ್​ಎಸ್​ಎಸ್ ಹುಬ್ಬಳ್ಳಿ ನಿಲ್ದಾಣದಿಂದ ಮೈಸೂರು ನಿಲ್ದಾಣಗಳವರೆಗಿನ ಈ ರೖಲಿನ ವೇಳಾಪಟ್ಟಿ ಮತ್ತು ನಿಲುಗಡೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net