

ಹುಬ್ಬಳ್ಳಿ : ಹೌರಾ- ಯಶವಂತಪುರ -ಹೌರಾ ಸೂಪರ್ಫಾಸ್ಟ್ ವೀಕ್ಲಿ ಎಕ್ಸ್ಪ್ರೆಸ್ ಸ್ಪೇಷಲ್ ರೈಲು ಸಂಚಾರವನ್ನು ನಾಲ್ಕು ಟ್ರಿಪ್ ಹೆಚ್ಚಿಸಲಾಗುತ್ತಿದೆ.
ಈ ಮೊದಲು ಜೂನ 27ರವರೆಗೆ ನಿಗದಿಯಾಗಿದ್ದ ಹೌರಾ-ಯಶವಂತಪುರ ಸೂಪರ್ಫಾಸ್ಟ್ ವೀಕ್ಲಿ ಎಕ್ಸ್ಪ್ರೆಸ್ ಸ್ಪೇಷಲ್ ರೈಲು, ಜುಲೈ 25ರವರೆಗೆ ಸಂಚರಿಸಲಿದೆ.
ಜೂ. 29ರವರೆಗೆ ಸಂಚರಿಸಬೇಕಿದ್ದ ಯಶವಂತಪುರ- ಹೌರಾ ಸೂಪರ್ಫಾಸ್ಟ್ ವೀಕ್ಲಿ ಎಕ್ಸ್ಪ್ರೆಸ್ ಸ್ಪೇಷಲ್ ರೈಲು, ಜುಲೈ 27ರವರೆಗೆ ಸಂಚರಿಸಲಿದೆ.