ರೈಲು ಸಂಚಾರದಲ್ಲಿ ಬದಲಾವಣೆ

RAIL NEWS
Published on

ಹುಬ್ಬಳ್ಳಿ : ಗುಂಟೂರು ರೈಲ್ವೆ ವಿಭಾಗ ವ್ಯಾಪ್ತಿಯಲ್ಲಿ ಕೈಗೊಂಡಿರುವ ಸುರಕ್ಷತೆಗೆ ಸಂಬಂಧಿಸಿದ ಕಾಮಗಾರಿಗಳಿಂದಾಗಿ ಈ ಮಾರ್ಗದ ವಿವಿಧ ರೈಲುಗಳ ಸಂಚಾರವನ್ನು ತಾತ್ಕಾಲಿವಾಗಿ ರದ್ದುಗೊಳಿಸಲಾಗಿದೆ.

ಸೆ. 18 ರಿಂದ 24ರವರೆಗೆ ಎಸ್​ಎಸ್​ಎಸ್ ಹುಬ್ಬಳ್ಳಿ - ವಿಜಯವಾಡಾ ಡೈಲಿ ಎಕ್ಸ್​ಪ್ರೆಸ್, 19 ರಿಂದ 25ರವರೆಗೆ ವಿಜಯವಾಡಾ - ಎಸ್​ಎಸ್​ಎಸ್ ಹುಬ್ಬಳ್ಳಿ ಡೈಲಿ ಎಕ್ಸ್​ಪ್ರೆಸ್ ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ.

ಸಂಚಾರ ಬದಲಾವಣೆ :

ತಲ್ಕಾಲ್ ಯಾರ್ಡ್​ನಲ್ಲಿ ಇಂಜಿನಿಯರಿಂಗ್ ಕಾರ್ಯ ಕೈಗೊಂಡಿರುವುದರಿಂದ ಕೆಲವು ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.

ಎಸ್​ಎಸ್​ಎಸ್ ಹುಬ್ಬಳ್ಳಿ - ಕಾರಟಗಿ - ಎಸ್​ಎಸ್​ಎಸ್ ಹುಬ್ಬಳ್ಳಿ ಡೈಲಿ ಪ್ಯಾಸೆಂಜರ್ ಸ್ಪೇಷಲ್ ರೈಲು ಸಂಚಾರವನ್ನು ಸೆ. 18 ರಿಂದ 23ರವರೆಗೆ, ಎಸ್​ಎಸ್​ಎಸ್ ಹುಬ್ಬಳ್ಳಿ - ಗುಂತಕಲ್- ಎಸ್​ಎಸ್​ಎಸ್ ಹುಬ್ಬಳ್ಳಿ ಡೈಲಿ ಪ್ಯಾಸೆಂಜರ್ ಸ್ಪೇಷಲ್ ರೈಲು ಸಂಚಾರವನ್ನು ಸೆ. 18 ರಿಂದ 23ರವರೆಗೆ ರದ್ದುಗೊಳಿಸಲಾಗಿದೆ.

ಭಾಗಶಃ ರದ್ದು : ಛತ್ರಪತಿ ಶಿವಾಜಿ ಮಹಾರಾಜ ಟರ್ವಿುನಸ್ ಮುಂಬೈ- ಹೊಸಪೇಟೆ ಡೈಲಿ ಸೂಪರ್​ಫಾಸ್ಟ್ ಎಕ್ಸ್​ಪ್ರೆಸ್ ರೈಲು ಸೆ. 17, 20, 21 ಮತ್ತು 22ರಂದು ಗದಗವರೆಗೆ ಮಾತ್ರ ಸಂಚರಿಸಲಿದೆ. ಸೆ. 18, 21, 22 ಮತ್ತು 23ರಂದು ಹೊಸಪೇಟೆ ಛತ್ರಪತಿ ಶಿವಾಜಿ ಮಹಾರಾಜ ಟರ್ವಿುನಸ್ ಮುಂಬೈ ಡೈಲಿ ಸೂಪರ್​ಫಾಸ್ಟ್ ಎಕ್ಸ್​ಪ್ರೆಸ್ ರೈಲು ಗದಗ ನಿಲ್ದಾಣದಿಂದ ಸಂಚಾರ ಪ್ರಾರಂಭಿಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net