ರೈಲು ವಿಮಾನ ಸೇವೆಗಾಗಿ ಸಚಿವರಿಗೆ ಮನವಿ

IMG-20250803-WA0017_1.jpg
Published on

ಹುಬ್ಬಳ್ಳಿ: ನಗರದಿಂದ ರಾಜಸ್ಥಾನದ ವಿವಿಧ ನಗರಗಳಿಗೆ ನೇರ ರೈಲು ಹಾಗೂ ವಿಮಾನ ಸಂಪರ್ಕ ಕಲ್ಪಿಸಲು ಕೇಂದ್ರ ಸಚಿವರಿಗೆ ಜೈನ್ ಸಂಘಟನೆಗಳ ಪದಾಧಿಕಾರಿಗಳು ಮನವಿ ಮಾಡಿದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರನ್ನು ಭೇಟಿ ಮಾಡಿದ ಶ್ರೀರಾಮದೇವ ಮರುಧರ ಸಂಘ, ಜೈನ್ ಮರುಧರ ಸಂಘ, ಬಿಜಿಎಸ್ ಮಹಾವೀರ ಯೂಥ್ ಫೆಡರೇಶನ್ ಮತ್ತು ವಿವಿಧ ಸಂಘಟನೆಗಳ ಪದಾಧಿಕಾರಿಗಳ ನಿಯೋಗವು ತಮ್ಮ ವಿವಿಧ ಬೇಡಿಕೆಗಳ ಮನವಿ ಸಲ್ಲಿಸಿತು.

ಹುಬ್ಬಳ್ಳಿಯಿಂದ ಜೋಧಪುರ ಮತ್ತು ಬಿಕಾನೇರಿಗೆ ರೈಲು ಸಂಪರ್ಕ ಮತ್ತು ಹುಬ್ಬಳ್ಳಿಯಿಂದ ಅಹಮದಾಬಾದ್ ಮತ್ತು ಜೋಧಪುರಕ್ಕೆ ವಿಮಾನ ಸಂಪರ್ಕ ಸೇವೆಯ ಅಗತ್ಯತೆ ಬಗ್ಗೆ ನಿಯೋಗದ ಸದಸ್ಯರು ಚರ್ಚೆ ನಡೆಸಿದರು.

ಧಾರವಾಡ ಜಿಲ್ಲೆಯ ಜನಸಂಖ್ಯೆ ಹೆಚ್ಚಾಗುತ್ತಿದೆ. ರೈಲು, ವಿಮಾನದಲ್ಲಿ ಪ್ರಯಾಣಕ್ಕೆ ಆದ್ಯತೆ ನೀಡುತ್ತಿದ್ದಾರೆ. ವ್ಯಾಪಾರ, ವಾಣಿಜ್ಯ ಚಟುವಟಿಕೆ ಅಷ್ಟೇ ಅಲ್ಲದೇ ಬೇರೆಬೇರೆ ಕೆಲಸ ಕಾರ್ಯಗಳಿಗೆ ಪ್ರಯಾಣ ಮಾಡುತ್ತಾರೆ. ಹಾಗಾಗಿ ಇವುಗಳ ಸೇವೆ ಹೆಚ್ಚಿಸುವುದು ಅಗತ್ಯವಾಗಿದೆ ಎಂದು ಹೇಳಿದರು.

ಮನವಿ ಸ್ವೀಕರಿಸಿದ ಕೇಂದ್ರ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ ಸಂಬಂಧಪಟ್ಟ ಸಚಿವರ ಗಮನಕ್ಕೆ ತರುವ ಭರವಸೆ ನೀಡಿದರು.

ನಿಯೋಗದಲ್ಲಿ ಉದಾರಾಮ ಪ್ರಜಾಪತ, ಅಮೃತ ಜೈನ್, ದೂದಾಬಾಯ್ ಚೌದರಿ, ಆನಂದಕುಮಾರ ಪಟ್ವಾ, ಸುರೇಶ ಜೈನ್, ಮಹೇಂದ್ರ ಪಾಲ್ಗೋತಾ, ಜಾಮಾಥಾರಾಮ ದೇವಾಸಿ, ಸೋಪರಾಮ ಪಟೇಲ್, ಮಲಾರಾಮ ರೇಕ್ ದೇವಾಸಿ, ಅಭಿಷೇಕ ಛಗನ್ರಾಜ್ ಮೆಹ್ತಾ, ಹನುಮಾನಜಿ ಕಿನ್ಸವರಾ, ತ್ರಿವೇಂದ್ರ ಖತ್ರಿ, ಫರಭತಸಿಂಗ್, ವಿಕ್ರಮ ಜೈನ್, ಫುಕರಾಜ ಧರವಿ, ಜಿತೇಂದ್ರ ಪಾಲ್ಗೋತಾ, ಲಕ್ಷ್ಮಣ ಶಿರವಿ, ಬಾಬುಲಾಲ ಶಿರವಿ, ಸುರೇಶ ಸಿ. ಜೈನ್, ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net