

ರಾಮದುರ್ಗ: ಬಾಗಲಕೋಟೆ ಜಿಲ್ಲೆಯ ಲೋಕಾಪುರ, ರಾಮದುರ್ಗ ಮಾರ್ಗವಾಗಿ ನೂತನವಾಗಿ ಧಾರವಾಡಕ್ಕೆ ರೈಲ್ವೆ ಮಾರ್ಗದ ಸಂಪರ್ಕ ಕಲ್ಪಿಸುವಂತೆ ಒತ್ತಾಯಿಸಿ ಪಟ್ಟಣದಲ್ಲಿ ರಾಮದುರ್ಗ ತಾಲೂಕು ರೈಲ್ವೆ ಹೋರಾಟ ಕ್ರಿಯಾ ಸಮಿತಿ ನೇತೃತ್ವದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಪ್ರಕಾಶ ಹೊಳೆಪ್ಪಗೋಳ ಅವರಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯ ರೈಲ್ವೆ ಅಭಿವದ್ಧಿ ಸಮಿತಿ ಅಧ್ಯ ಕುತುಬುದ್ಧಿನ್ ಖಾಜಿ ಮಾತನಾಡಿ, ಲೋಕಾಪುರ ಮಾರ್ಗವಾಗಿ ರಾಮದುರ್ಗ ಮೂಲಕ ಧಾರವಾಡ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಎಲ್ಲರೂ ಪಾತೀತವಾಗಿ ಹೋರಾಟಕ್ಕೆ ಕೆಜೋಡಿಸಬೇಕು. ಸ್ಥಳಿಯ
ಶಾಸಕರು ಹಾಗೂ ಜಿಲ್ಲೆಯ ಸಂಸದರು ಇಚ್ಛಾಶಕ್ತಿಯಿಂದ ಜನರ ಬೇಡಿಕೆಗೆ ಸ್ಪಂದಿಸಿ, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಆಗ್ರಹಿಸಿದರು.
ಸ್ಥಳಿಯ ಶಾಂತವೀರ ಸ್ವಾಮೀಜಿ, ಬಟಕುರ್ಕಿ ಬಸವಲಿಂಗ ಸ್ವಾಮೀಜಿ, ಜಾಲಿಕಟ್ಟಿ ಕಷ್ಣಾನಂದ ಸ್ವಾಮೀಜಿ, ನಾಗನೂರ ಬಸವಪ್ರಕಾಶ ಸ್ವಾಮೀಜಿ ಮತ್ತು ಬಸವಗೀತಾ ತಾಯಿ, ಚಿಪ್ಪಲಕಟ್ಟಿ ಕಲ್ಮೇಶ್ವರ ಸ್ವಾಮೀಜಿ, ಹರ್ಲಾಪುರ ರೇಣುಕ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಮೌಲಾನಾ ಇಮಾಮಹುಸೇನ ಮುಲ್ಲಾ, ಮೌಲಾನಾ ಅಸ್ಲಂ ಜಮಾದಾರ ಮಾತನಾಡಿ, ಸ್ಥಳಿಯ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಪಾತೀತವಾಗಿ ಈ ಭಾಗದ ಜನರ ಬೇಡಿಕೆಯಾದ ರೈಲ್ವೆ ಸಂಪರ್ಕ ಬೇಡಿಕೆ ಈಡೇರಿಸಲು ಶ್ರಮಿಸಬೇಕು ಎಂದು ಆಗ್ರಹಿಸಿದರು.
ಪಟ್ಟಣದ ವೆಂಕಟೇಶ್ವರ ದೇವಸ್ಥಾನದಿಂದ ಪ್ರಾರಂಭಗೊಂಡ ಪ್ರತಿಭಟನಾ ಮೆರವಣಿಗೆ ಸರ್ಕಾರಿ ಆಸ್ಪತ್ರೆ ಎದುರಿನ ಹುತಾತ್ಮ ಚೌಕ್, ಜುನಿಪೇಟ, ಹಳೇ ಬಸ್ ನಿಲ್ದಾಣ ಮಾರ್ಗವಾಗಿ ಮಿನಿ ವಿಧಾನಸೌಧದ ಎದುರಿನ ಮುಖ್ಯ ವೇದಿಕೆಗೆ ಆಗಮಿಸಿ ಸಮಾವೇಶಗೊಂಡಿತು.
ವಿರಕ್ತಮಠ ಟ್ರಸ್ಟ್ ಅಧ್ಯ ಪ್ರದಿಪ ಪಟ್ಟಣ, ಧನಲಕ್ಷಿ$್ಮ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯ ಮಲ್ಲಣ್ಣ ಯಾದವಾಡ, ಬಿಜೆಪಿ ತಾಲೂಕಾಧ್ಯ ಡಾ.ಕೆ.ವಿ. ಪಾಟೀಲ, ಹೋರಾಟ ಸಮಿತಿಯ ಬಶೀರಅಹ್ಮದ್ ಬೆರಕದಾರ, ಗೆಬು ಜೆನೇಖಾನ್ ಇತರರಿದ್ದರು.