

ಹುಬ್ಬಳ್ಳಿ : ಕ್ಯಾಸಲ್ರಾಕ್-ಕರಂಜೋಲ್ ನಿಲ್ದಾಣಗಳ ಮಧ್ಯೆ ಭೂಕುಸಿತ ಉಂಟಾಗಿದ್ದರಿಂದ ಈ ಮಾರ್ಗದ ವಿವಿಧ ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.
ಜು. 31ರಂದು ವಾಸ್ಕೊ -ವೆಲಂಕನ್ನಿ ಎಕ್ಸ್ಪ್ರೆಸ್, ಆ.1ರಂದು ವೆಲಂಕನ್ನಿ- ವಾಸ್ಕೊ ಎಕ್ಸ್ಪ್ರೆಸ್ ರೈಲು, ಜು. 31 ಮತ್ತು ಆ. 1ರಂದು ವಾಸ್ಕೊ - ಯಶವಂತಪುರ ಎಕ್ಸ್ಪ್ರೆಸ್ ಹಾಗೂ ಯಶವಂತಪುರ - ವಾಸ್ಕೊ ಎಕ್ಸ್ಪ್ರೆಸ್ ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ.
ಭಾಗಶಃ ರದ್ದು : ಜು. 31 ಹಾಗೂ ಆ1 ರಂದು ವಾಸ್ಕೊ - ಹಜರತ್ ನಿಜಾಮುದ್ದಿನ್ ಎಕ್ಸ್ಪ್ರೆಸ್ ರೈಲು ಬೆಳಗಾವಿಯಿಂದ ಸಂಚಾರ ಪ್ರಾರಂಭಿಸಲಿದೆ. ಜು. 30ರಂದು ಕಚೆಗುಡ- ವಾಸ್ಕೊ ಸ್ಲಿಪ್ ಕೋಚ್ ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣದವರೆಗೆ ಮಾತ್ರ ಸಂಚರಿಸಲಿದೆ. ಆ. 1ರಂದು ವಾಸ್ಕೊ - ಶಾಲಿಮಾರ ಎಕ್ಸ್ಪ್ರೆಸ್ ರೈಲು ಹಾಗೂ ವಾಸ್ಕೊ - ಕಚೆಗುಡ ಸ್ಲಿಪ್ ಕೋಚೆಸ್ ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣದಿಂದ ಸಂಚಾರ ಪ್ರಾರಂಭಿಸಲಿವೆ.
ಜು. 31 ಮತ್ತು ಆ. 1ರಂದು ಮಿರಜ್ - ಕ್ಯಾಸಲ್ರಾಕ್ ಎಕ್ಸ್ಪ್ರೆಸ್ ರೈಲು ಬೆಳಗಾವಿವರೆಗೆ ಮಾತ್ರ ಸಂಚರಿಸಲಿದೆ. ಅದೇ ದಿನ ಕ್ಯಾಸಲ್ರಾಕ್- ಮಿರಜ್ ಎಕ್ಸ್ಪ್ರೆಸ್ ರೈಲು ಬೆಳಗಾವಿಯಿಂದ ಸಂಚಾರ ಪ್ರಾರಂಭಿಸಲಿದೆ. ಜು. 30ರಂದು ಸಂಚಾರ ಪ್ರಾರಂಭಿಸುವ ಹಜರತ್ ನಿಜಾಮುದ್ದಿನ್ - ವಾಸ್ಕೊ ಎಕ್ಸ್ಪ್ರೆಸ್ ರೈಲು ಬೆಳಗಾವಿವರೆಗೆ ಮಾತರ ಸಂಚರಿಸಲಿದೆ. ಆ. 2ರಂದು ವಾಸ್ಕೊ - ಹಜರತ್ ನಿಜಾಮುದ್ದಿನ್ ಎಕ್ಸ್ಪ್ರೆಸ್ ರೈಲು ಬೆಳಗಾವಿಯಿಂದ ಸಂಚಾರ ಪ್ರಾರಂಭಿಸಲಿದೆ ಎಂದು ನೈಋತ್ಯ ರೈಲ್ವೆ ವಲಯದ ಕಚೇರಿ ಪ್ರಕಟಣೆ ತಿಳಿಸಿದೆ.