

ಮಂಗಳೂರು : ಹಳಿ ನಿರ್ವಹಣೆ ಕಾಮಗಾರಿ ಹಿನ್ನೆಲೆಯಲ್ಲಿ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ. ಶೊರ್ನೂರು ಜಂಕ್ಷನ್ನಿಂದ ಆ.4ರಂದು ಹೊರಡಬೇಕಾಗಿದ್ದ ಶೊರ್ನೂರು ಜಂಕ್ಷನ್-ಕೋಝಿಕೋಡ್ ಸ್ಪೆಷಲ್ ರೈಲು (ನಂ.06455) ಸಂಪೂರ್ಣ ರದ್ದಾಗಿದೆ.
ಮಂಗಳೂರು ಸೆಂಟ್ರಲ್ನಿಂದ ಆ.6ರಂದು ಹೊರಡುವ ಮಂಗಳೂರು ಸೆಂಟ್ರಲ್-ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ ವೆಸ್ಟ್ ಕೋಸ್ಟ್ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ಮಾರ್ಗಮಧ್ಯೆ 30 ನಿಮಿಷ ನಿಲುಗಡೆಯಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.