ಮುಂದಿನ ತಿಂಗಳಿಂದ ಮುಂಗಡ ರೈಲು ಟಿಕೆಟ್ ಕಾದಿರಿಸುವ ಅವಧಿ ಇಳಿಕೆ

booking
Published on

ವಿಜಯವಾಣಿ ಸುದ್ದಿಜಾಲ ಮಂಗಳೂರು
ರೈಲು ಪ್ರಯಾಣದ ಮುಂಗಡ ಟಿಕೆಟ್ ಕಾದಿರಿಸುವ ಅವಧಿಯನ್ನು 120 ದಿನಗಳಿಂದ 60 ದಿನಗಳಿಗೆ ಇಳಿಸಿ ಕೇಂದ್ರ ರೈಲ್ವೆ ಸಚಿವಾಲಯವು ಆದೇಶ ಹೊರಡಿಸಿದೆ. ನವೆಂಬರ್ 1 ರಿಂದ ಪರಿಷ್ಕೃತ ಆದೇಶ ಜಾರಿಯಾಗಲಿದೆ.
120 ದಿನಗಳ ಮೊದಲು ಮುಂಗಡ ಟಿಕೆಟ್ ಕಾದಿರಿಸುವ ಸೌಲಭ್ಯ ಅಕ್ಟೋಬರ್ 31 ತನಕ ಪ್ರಯಾಣಿಕರಿಗೆ ಲಭ್ಯವಾಗಲಿದೆ.
ಆದರೆ ವಿದೇಶಿ ಪ್ರವಾಸಿಗರು 365 ದಿನಗಳು ಮೊದಲು ಮುಂಗಡ ಟಿಕೆಟ್ ಕಾದಿರಿಸುವ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net