ರೈಲು ಡಿಕ್ಕಿ ರಭಸಕ್ಕೆ ಚೆಲ್ಲಾಪಿಲ್ಲಿಯಾಗಿ ಬಿದ್ದು ಸತ್ತ 92 ಕುರಿಗಳು

Untitled-1 copy
Published on

ಕುರಿಗಾಹಿಗಳಿಗೆ ಸಾವಿರಾರು ರೂ ನಷ್ಟ ಉಂಟಾಗಿದ್ದು ಕಷ್ಟಪಟ್ಟು ಸಾಕಿ ಸಲುಹಿದ ಕುರಿಗಳನ್ನು ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಸ್ಥಳೀಯ ನಾಯಕರು ಸಮಾಧಾನಪಡಿಸಿದ್ದಾರೆ. ರೈಲ್ವೆ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಗ್ರಾಮದ ನಡುವೆ ಹಾದು ಹೋಗಿರುವ ರೈಲ್ವೆ ಹಳಿ ಪಕ್ಕದ ಜಮೀನಿನಲ್ಲಿ ಕುರಿಗಾಹಿಗಳಾದ ಕೂದಲಮ್ಮ, ಕೂದಲಪ್ಪ ಹಾಗೂ ದೇವರಾಜ್ ಕುರಿಗಳನ್ನು ಮೇಯಿಸುತ್ತಿದ್ದರು. ಇದರ ನಡುವೆ ನಾಯಿಗಳು ಕೆಲ ಕುರಿಗಳ ಮೇಲೆ ದಾಳಿ ಮಾಡಿವೆ. ಇದರಿಂದ ಬೆದರಿದ ಕುರಿಗಳ ಹಿಂಡು ರೈಲು ಹಳಿಯನ್ನು ದಾಟಲು ಹೋಗಿದ್ದು ಇದೇ ವೇಳೆ ಕೋಲಾರ ಮತ್ತು ಬೆಂಗಳೂರು ಮಾರ್ಗವಾಗಿ ಸಂಚರಿಸುತ್ತಿದ್ದ ರೈಲು ಡಿಕ್ಕಿ ಹೊಡೆದಿದೆ. ಹಾಗೆಯೇ ಸಿಕ್ಕ ಸಿಕ್ಕ ಕುರಿಗಳನ್ನು ಕಿ.ಮೀ ಗಟ್ಟಲೇ ಎಳೆದುಕೊಂಡು ಹೋಗಿದೆ. ರೈಲ್ವೆ ಹಳಿ, ರಸ್ತೆ ಬದಿಯಲ್ಲಿ 92 ಕುರಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.

ಚಿಕ್ಕಬಳ್ಳಾಪುರ ಮತ್ತು ಶಿಡ್ಲಘಟ್ಟ ರೈಲು ಮಾರ್ಗದ ಲಕ್ಕಹಳ್ಳಿ ಬಳಿ ದುರ್ಘಟನೆ ಸಂಭವಿಸಿದ್ದು ಗಾಯಾಳು ಕುರಿಗಾಹಿ ಕೂದಲಮ್ಮ (46). ಈಕೆಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದು ಚೇತರಿಸಿಕೊಳ್ಳುತ್ತಿದ್ದಾರೆ.

ಚಿಕ್ಕಬಳ್ಳಾಪುರ: ನಾಯಿಗಳ ದಾಳಿಗೆ ಬೆದರಿ ಓಡಿ ಹೋಗುವ ಸಂದರ್ಭದಲ್ಲಿ ರೈಲಿಗೆ ಸಿಲುಕಿ 92 ಕುರಿಗಳು ಮೃತಪಟ್ಟಿದ್ದು ರಕ್ಷಣೆಗೆ ಯತ್ನಿಸಿದ ಕುರಿಗಾಹಿ ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ. ಇನ್ನು ರೈಲು ಎಳೆದುಕೊಂಡು ಹೋದ ಹಿನ್ನೆಲೆಯಲ್ಲಿ ಕುರಿಗಳು ಕಿ.ಮೀ.ಗಟ್ಟಲೇ ಹಳಿಯ ಮೇಲೆ ಬಿದ್ದಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net