ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ದುರಂತ

08 HANUR 7
ವಡ್ಡರದೊಡ್ಡಿ ಗ್ರಾಮದ ಬಳಿ ಸಾರಿಗೆ ಬಸ್ ಚಕ್ರದ ನಟ್‌ಗಳು ಕಳಚಿರುವುದು.
Published on

ಹನೂರು: ತಾಲೂಕಿನ ರಾಮಾಪುರ ಹೋಬಳಿಯ ವಡ್ಡರದೊಡ್ಡಿ ಗ್ರಾಮದಲ್ಲಿ ಭಾನುವಾರ ಸಾರಿಗೆ ಬಸ್ ಚಕ್ರದ ನಟ್‌ಗಳು ಕಳಚಿರುವುದನ್ನು ಚಾಲಕ ಗಮನಿಸಿ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿಸಿದ್ದಾರೆ.


ಬೆಳಗ್ಗೆ 8ರ ವೇಳೆಯಲ್ಲಿ ಪ್ರಯಾಣಿಕರಿದ್ದ ಬಸ್ ಜಲ್ಲಿಪಾಳ್ಯದಿಂದ ಮೈಸೂರಿನ ಕಡೆಗೆ ತೆರಳುತ್ತಿತ್ತು. ಈ ವೇಳೆ ವಡ್ಡರದೊಡ್ಡಿ ಗ್ರಾಮದ ಬಳಿ ಬಸ್ ವಾಲಿದಂತೆ ಬಾಸವಾಗುತ್ತಿದ್ದಂತೆ ಚಾಲಕ ತಕ್ಷಣ ಬಸ್ ನಿಲ್ಲಿಸಿ ಚಕ್ರವನ್ನು ವೀಕ್ಷಿಸಿದಾಗ ನಟ್‌ಗಳು ಕಳಚಿ ಬಿದ್ದಿರುವುದನ್ನು ಗಮನಿಸಿದ್ದ ಇದರಿಂದ ಬಸ್ಸಿನಲ್ಲಿದ್ದವರು ಕೆಲಕಾಲ ಆತಂಕಕ್ಕೆ ಒಳಗಾದರು. ಬಳಿಕ ನಟ್‌ಗಳನ್ನು ಅಳವಡಿಸಲಾಯಿತು. ಚಾಲಕನ ಸಮಯ ಪ್ರಜ್ಞೆಯ ಬಗ್ಗೆ ಪ್ರಯಾಣಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.

ಈ ಸಂಬಂಧ ಕೂಡಲೂರು ಗ್ರಾಮದ ವೆಂಕಟಾಚಲ ಮಾತನಾಡಿ, ಈ ಮಾರ್ಗದಲ್ಲಿ ಸಂಚರಿಸುವ ಬಸ್‌ಗಳು ಹಳೆಯದಾಗಿವೆ. ಇದರಿಂದ ಆಗ್ಗಾಗ್ಗೆ ರಸ್ತೆಯಲ್ಲೇ ಕೆಟ್ಟು ನಿಲ್ಲುತ್ತಿವೆ. ಇದರಿಂದ ಜನರಿಗೆ ತೊಂದರೆಯಾಗುತ್ತಿದೆ. ಈ ಮಾರ್ಗಕ್ಕೆ ಹೊಸ ಬಸ್ ಬಿಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಲಾಗಿದೆ. ಆದರೂ ಪ್ರಯೋಜನವಾಗಿಲ್ಲ. ಇದೀಗ ಹಳೇ ಬಸ್‌ನಲ್ಲಿ ಚಕ್ರದ ನಟ್‌ಗಳು ಕಳಚಿ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಒಂದು ವೇಳೆ ಅನಾಹುತ ಸಂಭವಿಸಿದ್ದರೆ ಯಾರು ಹೊಣೆ? ಸಂಬಂಧಪಟ್ಟ ಸಾರಿಗೆ ಇಲಾಖೆ ಅಧಿಕಾರಿಗಳು ಈ ಮಾರ್ಗಕ್ಕೆ ಹೊಸ ಬಿಡಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಫೋಟೋ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net