

ಹುಬ್ಬಳ್ಳಿ : ರಾಷ್ಟ್ರೀಯ ರಸ್ತೆ ಸುರಕ್ಷತಾ ಅಭಿಯಾನದ ಅಂಗವಾಗಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ವತಿಯಿಂದ ಮಂಗಳವಾರದಂದು ನಗರದ ವಿವಿಧೆಡೆ ಸಂಚಾರ ನಿಯಮಗಳು, ರಸ್ತೆ ಸುರಕ್ಷತೆ ಹಾಗೂ ಪಾದಚಾರಿಗಳ ಸುರಕ್ಷತೆಯನ್ನು ಕಾಯ್ದುಕೊಳ್ಳುವ ಕುರಿತಂತೆ ಅಗತ್ಯ ತಿಳಿವಳಿಕೆ ನೀಡಿದರು.
ನಗರದ ಎಂ.ಟಿ.ಮಿಲ್, ಕಾರವಾರ ರಸ್ತೆ ಆಟೋ ನಿಲ್ದಾಣ ಹಾಗೂ ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣದಲಿ ಆಟೋರಿಕ್ಷಾ ಚಾಲಕರು ಹಾಗೂ ಮಾಲೀಕರಿಗೆ ಹಿರಿಯ ಮೋಟಾರ್ ವಾಹನ ನೀರಿಕ್ಷಕರಾದ ವಿರೂಪಾಕ್ಷಪ್ಪ ಆನೇಪ್ಪಗೋಳ ಅವರ ನೇತೃತ್ವದಲ್ಲಿ ಮಾಹಿತಿ ನೀಡಲಾಯಿತು.
ಈ ಅಭಿಯಾನದಲ್ಲಿ ಹಾಜರಿದ್ದ ಆಟೋರಿಕ್ಷಾ ವಾಹನಗಳಿಗೆ ರಸ್ತೆ ಸುರಕ್ಷತೆ ಘೊಷಣೆಗಳುಳ್ಳ ಸ್ಟಿಕ್ಕರ್ಗಳನ್ನು ಅಂಟಿಸಲಾಯಿತು. ಆಟೋರಿಕ್ಷಾ ಚಾಲಕರು, ಮಾಲೀಕರು ಹಾಗೂ ಸಾರ್ವಜನಿಕರಿಗೆ ರಸ್ತೆ ಸುರಕ್ಷತೆಯ ಕುರಿತಂತೆ ಬಿಡುಗಡೆ ಮಾಡಲಾದ ಕರಪತ್ರಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.